ಸುಳ್ಯ: ಸುಳ್ಯದ ಸೆವೆನ್ ಸ್ಟಾರ್ ತಂಡದ ನೇತೃತ್ವದಲ್ಲಿ ಶಿವದೂತೆ ಗುಳಿಗೆ ತುಳು ನಾಟಕ ಪ್ರದರ್ಶನ ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ನಡೆಯಿತು.ನಾಟಕ ಸುಳ್ಯದ ಪ್ರೇಕ್ಷಕರ ಮನಸೂರೆಗೊಂಡಿತು. ಈ ಸಂದರ್ಭದಲ್ಲಿ ಸೆವೆನ್ ಸ್ಟಾರ್ ತಂಡ ಹಾಗೂ ಬಂಟರ ಯಾನೆ ನಾಡವರ
ಸಂಘದ ವತಿಯಿಂದ ಜನಪ್ರಿಯವಾಗಿ ಪ್ರದರ್ಶನ ಕಾಣುತ್ತಿರುವ ‘ಶಿವದೂತೆ ಗುಳಿಗೆ’ ನಾಟಕದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಅವರನ್ನು ಸನ್ಮಾನಿಸಲಾಯಿತು.
ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈ, ಕಾರ್ಯದರ್ಶಿ ಸುಭಾಶ್ಚಂದ್ರ ರೈ, ಕೋಶಾಧಿಕಾರಿ ಗಂಗಾಧರ ರೈ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಬೂಡು ರಾಧಾಕೃಷ್ಣ ರೈ, ಸುನಿಲ್ ಕೇರ್ಪಳ, ಕುಸುಮಾಧರ ರೈ ಬೂಡು, ರಮೇಶ್ ಶೆಟ್ಟಿ ಬೂಡು, ದಯಾಕರ ರೈ, ಮಹಾಬಲ ರೈ, ಬಾಲಕೃಷ್ಣ ರೈ ಪಾದೆಕಲ್ಲು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.