ಮಡಿಕೇರಿ: ಮಾನಸಿಕ ಒತ್ತಡ ಕಡಮೆಮಾಡಿ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಶಕ್ತಿ ಸಂಗೀತಕ್ಕಿದ್ದು, ಭಾವನಾತ್ಮಕವಾಗಿ ಒಗ್ಗೂಡಿಸುವ ಅದ್ಪುತ ಕಲೆಯಾಗಿಯೂ ಸಂಗೀತವಾಗಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಹೇಳಿದ್ದಾರೆ.ನಗರದ ಬ್ರಾಹ್ಮಣ ವಿದ್ಯಾಭಿವೖದ್ದಿ ನಿಧಿಯ ಶತಮಾನೋತ್ಸವ ಸಭಾಂಗಣದಲ್ಲಿ ಮುಳಿಯ ಜ್ಯುವೆಲ್ಲರ್ಸ್ ಸಂಸ್ಥೆಯ ವತಿಯಿಂದ ಆಯೋಜಿತ ಗಾನರಥ
ಸಂಗೀತ ಸ್ಪಧೆ೯ಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅನಿಲ್, ಮನಸ್ಸನ್ನು ಉಲ್ಲಾಸಗೊಳಿಸುವ , ಜಗತ್ತನ್ನು ಲವಲವಿಕೆಯಿಂದ ಇರಿಸುವ ಅಪೂವ೯ ಶಕ್ತಿ ಸಂಗೀತಕ್ಕಿದೆ. ಅನೇಕ ಕಾಯಿಲೆಗಳ ನಿವಾರಣೆಗೂ ಸಂಗೀತ ಮದ್ದಾಗಿದೆ. ಮ್ಯೂಸಿಕ್ ತೆರಪಿ ಜಗತ್ತಿನಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ಜನಪ್ರಿಯವಾಗುತ್ತಿದೆ. ಮನರಂಜನೆಯ ಪ್ರಮುಖ ಅಂಶವಾಗಿರುವ ಸಂಗೀತ ಕಲೆ, ನಮ್ಮ ಸಂಸ್ಕೖತಿಯ ಪ್ರತಿಬಿಂಬವಾಗಿ ಕೂಡ ಗುರುತಿಸಲ್ಪಟ್ಟಿದೆ ಎಂದು ಸಂಗೀತ ಕ್ಷೇತ್ರದ ಹಿರಿಮೆಯನ್ನು ವಣಿ೯ಸಿದರು.
ಹಿರಿಯ ಸಾಹಿತಿ, ಕಲಾವಿದೆ ಮೊಣ್ಣಂಡ ಶೋಭಾಸುಬ್ಬಯ್ಯ, ಗಾನರಥ ಕಾಯ೯ಕ್ರಮ ಉದ್ಘಾಟಿಸಿದರು.

ಮುಳಿಯ ಸಂಸ್ಥೆಯ ಅಧ್ಯಕ್ಷರಾದ ಕೇಶವಪ್ರಸಾದ್ ಮುಳಿಯ ಮಾತನಾಡಿ, ಬೆಳ್ತಂಗಡಿಯಿಂದ ಪ್ರಾರಂಭವಾದ ಗಾನರಥ ಎಂಬ ಸಾಂಸ್ಕೖತಿಕ ತೇರು ಕೊಡಗಿನಲ್ಲಿಯೂ ಎರಡನೇ ವಷ೯ಕ್ಕೆ ಕಾಲಿರಿಸಿದೆ. ಗಾನರಥದ ಮೂಲಕ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ನೂರಾರು ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಿದ ಹೆಮ್ಮೆ ನಮ್ಮದಾಗಿದೆ. ಮುಂದಿನ ವಷ೯ಗಳಲ್ಲಿಯೂ ಜಿಲ್ಲೆಗಳ ತಾಲೂಕು ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ಕೈಗೊಂಡು ಗಾನರಥದ ಮೂಲಕ ಮತ್ತಷ್ಟು ಗಾಯಕರನ್ನು ಬೆಳಕಿಗೆ ತರಲಾಗುತ್ತದೆ ಎಂದು ಹೇಳಿದರು.
ಮುಳಿಯ ಸಂಸ್ಥೆಯ ಗೌರವ ಸಲಹೆಗಾರ ವೇಣುಶಮ೯, ಶಾಖಾ ಪ್ರಬಂಧಕರಾದ ತೀತಿಮಾಡ ಸೋಮಣ್ಣ, ಬಿ.ಎಸ್. ಕಿಶೋರ್, ಸಂಜೀವ ಹಾಜರಿದ್ದರು. ಬಾಳೆಯಡ ದಿವ್ಯ ಮಂದಪ್ಪ ಕಾಯ೯ಕ್ರಮ ನಿರೂಪಿಸಿದರು.ಇದೇ ಸಂದಭ೯ ಗಾನರಥ ಕಾಯ೯ಕ್ರಮದ ಮೂಲಕ ಸಾಂಸ್ಕೖತಿಕ ಕ್ಷೇತ್ಪಕ್ಕೆ ಪ್ರೋತ್ಸಾಹ ನೀಡುತ್ತಿರುವ ಮುಳಿಯ ಸಂಸ್ಥೆಯ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರನ್ನು ಮಡಿಕೇರಿ ತಾಲೂಕು ಜಾನಪದ ಪರಿಷತ್ ಪರವಾಗಿ ಅಧ್ಯಕ್ಷರಾದ ಅನಿಲ್ ಎಚ್.ಟಿ, ನಿದೇ೯ಶರಾದ ಕೆ.ಜಯಲಕ್ಷ್ಮಿ, ಪ್ರತಿಮಾ ರೈ, ರೀನಾ ಅನಿಲ್ ಸನ್ಮಾನಿಸಿದರು.
ಜಿಲ್ಲೆಯ ವಿವಿಧೆಡೆಗಳಿಂದ ಕಲಾವಿದರು ಗಾನರಥದಲ್ಲಿ ಪಾಲ್ಗೊಂಡಿದ್ದರು.
ವಿವಿಧ ಹಂತಗಳಲ್ಲಿ ನಡೆದ ಗಾನರಥ ಸ್ಪಧೆ೯ಯಲ್ಲಿ ವಿಜೇತರಾದವರ ವಿವರ.
ಹಿರಿಯರ ವಿಭಾಗ – ದಿವಿಜೇಶ್ (ಪ್ರಥಮ), ಮಂಜುನಾಥ್ (ದ್ವಿತೀಯ), ಕಿರಣ್ ಕುಮಾರ್ (ತೖತೀಯ)
ಕಿರಿಯರ ವಿಭಾಗ – ಸಿಂಚನಗೌಡ (ಪ್ರಥಮ), ಶ್ರಾವ್ಯ (ದ್ವಿತೀಯ),ವನಿತಾ (ತೖತೀಯ)
ಗಾನರಥ ಸಂಗೀತ ಸ್ಪಧೆ೯ಯ ತೀಪು೯ಗಾರರಾಗಿ ನಾಪೋಕ್ಲುವಿನ ಸರಸ್ವತಿ ಮನೋಹರಿ ಮತ್ತು ಬಾಳೆಲೆಯ ಚಂದ್ರಕಲಾ ಕಾಯ೯ನಿವ೯ಹಿಸಿದ್ದರು. 52 ಸ್ಪಧಿ೯ಗಳು ಗಾನರಥದ ಸೆಮಿಫೈನಲ್ ನಲ್ಲಿ ಪಾಲ್ಗೊಂಡು ಫೈನಲ್ ನಲ್ಲಿ 6 ಮಂದಿ ಎರಡು ವಿಭಾಗಗಳಲ್ಲಿ ಗಾನರಥದ ವಿಜೇತರಾಗಿ ಆಯ್ಕೆಗೊಂಡರು.