ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.75.87 ಮತದಾನ ದಾಖಲಾಗಿದೆ. 6.58,761 ಪುರುಷರು ಹಾಗೂ 6,92,803 ಮಹಿಳಾ ಮತದಾರರು ಸೇರಿ 13,51,582 ಮಂದಿ ಮತ ಚಲಾಯಿಸಿದ್ದಾರೆ. ದ.ಕ.ಜಿಲ್ಲೆಯಲ್ಲಿ 2018ರಲ್ಲಿ
![](https://thesulliamirror.com/wp-content/uploads/2023/05/IMG-20230510-WA0024-1024x478.jpg)
ಜಿಲ್ಲೆಯ ವಿವಿಧ ಕ್ಷೇತ್ರಗಳ ಮತದಾನ ವಿವರ
ಶೇ. 79.9 ಮತದಾನ ಆಗಿತ್ತು. ಸುಳ್ಯ ಕ್ಷೇತ್ರದಲ್ಲಿ ಶೇ.78.94 ಮತದಾನವಾಗಿದೆ 81,401 ಪುರುಷರು ಹಾಗೂ 81,235 ಮಹಿಳೆಯರು ಸೇರಿ1,62,636 ಮಂದಿ ಮತ ಚಲಾಯಿಸಿದ್ದಾರೆ.
ಪುತ್ತೂರಿನಲ್ಲಿ ಶೇ. 79.91 ಬೆಳ್ತಂಗಡಿ ಶೇ.80.33 ಬಂಟ್ವಾಳ ಶೇ. 80.27 ಮಂಗಳೂರು ನಗರ ಶೇ.77.38 ಮಂಗಳೂರು ನಗರ ದಕ್ಷಿಣ ಶೇ.64.89, ಮಂಗಳೂರು ನಗರ ಉತ್ತರ ಶೇ.71.6, ಮೂಡಬಿದ್ರೆ ಶೇ. 76 ಮತದಾನ ಆಗಿದೆ.