ಸುಳ್ಯ:ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯು ತೆಂಗಿನ ಮೌಲ್ಯವರ್ಧನೆಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳಲ್ಲಿ ಒಂದಾದ ತೆಂಗಿನಕಾಯಿಯ ಗೆರಟೆಯ ಉತ್ಪನ್ನಗಳ ತಯಾರಿಕಯ ಬಗ್ಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು. ತರಬೇತಿಯ ಪರಿಶೀಲನಾ ಸಭೆ ಆಯೋಜಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ರೈತ ಉತ್ಪಾದಕರ ಸಂಸ್ಥೆಯ ಕಾರ್ಪೊರೇಟ್ ಕಚೇರಿಯಲ್ಲಿ
ನಬಾರ್ಡ್ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ್ ಮತ್ತು ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ ನಿಯಮಿತ ಇವರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ನಬಾರ್ಡ್ನ ಎಜಿಎಂ ಸಂಗೀತ ಕರ್ತ, ಭಾರತೀಯ ವಿಕಾಸ್ ಟ್ರಸ್ಟ್ ಮಣಿಪಾಲ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್, ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷರಾದ ಕುಸುಮಾಧರ ಎಸ್ ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್ ಎ, ಎನ್ಆರ್ಎಲ್ಎಂ ಯೋಜನೆಯ ತಾಲೂಕು ಮೇಲ್ವಿಚಾರಕರಾದ ನಳಿನಿ ಮತ್ತು ಕೋಡಿಂಬಾಡಿ ಹಾಗೂ ವಿಟ್ಲ ಪಡನೂರ್ ಗ್ರಾಮದ ತೆಂಗಿನ ಗೆರಟೆ ಕಲಾಕೃತಿ ತಯಾರಿಕೆ ತರಬೇತಿಯಲ್ಲಿ ಭಾಗವಹಿಸಿದ ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.ತೆಂಗಿನ ಗೆರಟೆ ಕಲಾಕೃತಿ ತರಬೇತಿಯ ನಂತರ ಆದ ಬೆಳವಣಿಗೆ, ಮುಂದಿನ ಯೋಜನೆಗಳು, ಮಹಿಳೆಯರು ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಬಗ್ಗೆ ಚರ್ಚಿಸಲಾಯಿತು.