ಸುಳ್ಯ: ದೀಪಗಳ ಹಬ್ಬ ದೀಪಾವಳಿ ಆಚರಣೆಗೆ ಗ್ರಾಮ, ನಗರ ಸೇರಿ ನಾಡಿಗೆ ನಾಡೇ ಸಜ್ಜಾಗಿದೆ ನಿಂತಿದೆ. ಇನ್ನು ಮೂರು ದಿನಗಳ ಕಾಲ ದೀಪಾವಳಿ ಹಬ್ಬದ ಸಂಭ್ರಮ ಸಡಗರ. ದೀಪಾವಳಿಯ ಸ್ವಾಗತಕ್ಕೆ ನಾಡಿಗೆ ನಾಡೇ ಅಣಿಯಾಗಿದೆ. ಬದುಕಿನ, ಜಗದ ಕತ್ತಲು ಸರಿಸಿ ಬೆಳಕಿನ ಪ್ರಭೆ ಸೂಸುವ ಹಣತೆಗಳು.. ಆಕಾಶದಲ್ಲಿ ಬಣ್ಣದ ಚಿತ್ತಾರ ಬಿಡಿಸುವ ಸಿಡಿ ಮದ್ದಿನ ಅಬ್ಬರ.. ಮನೆ, ಬೀದಿ, ಅಂಗಡಿ, ಮುಂಗಟ್ಟುಗಳು ಎಲ್ಲೆಲ್ಲೂ
ದೀಪಗಳ ಅಲಂಕಾರದ ಶೋಭೆ.. ಪಟ ಪಟ ಸಿಡಿಯುವ ಪಟಾಕಿಯ ಶಬ್ದಗಳು.. ಚಿತ್ತಾರ ಬಿಡಿಸುವ ನೆಲ ಚಕ್ರಗಳು..ಕಡ್ಡಿಗಳು.. ಒಟ್ಟಿನಲ್ಲಿ ಇನ್ನು ಮೂರು ದಿನಗಳ ಕಾಲ ದೀಪಾವಳಿ ಸಂಭ್ರಮ ರಂಗೇರಲಿದೆ. ಸುಳ್ಯ ಸೇರಿದಂತೆ ದೀಪಾವಳಿ ಸ್ವಾಗತಿಸಲು ಭರ್ಜರಿ ಸಿದ್ಧತೆಗಳೇ ನಡೆದಿದೆ. ದೀಪಾವಳಿಗೆಂದೇ ಬಳಸುವ ವಿಶಿಷ್ಟ ವಸ್ತುಗಳು ವಾರದ ಮೊದಲೇ ಅಂಗಡಿ ಮುಂಗಟ್ಟುಗಳಲ್ಲಿ ತಯಾರಾಗಿದೆ. ಬೆಳಕಿನ ಪ್ರಭೆ ಹರಿಸಲು ಅಂಗಡಿಗಳಿಗೆ ವಿವಿಧ ಬಗೆಯ ವೈವಿಧ್ಯಮಯ ಅಣತೆಗಳು ಬಂದಿದೆ. ಮಣ್ಣಿನ, ಭರಣಿಯ ಹೀಗೆ ವೈವಿಧ್ಯಮಯ ಅಣತೆಗಳು ಅಣಿಯಾಗಿ
ದೀಪಾವಳಿ ಸಂಭ್ರಮದ ಸ್ವಾಗತಕ್ಕೆ ನಾಡಿಗೇ ನಾಡೇ ಸಜ್ಜು:
Watch and Subscribe
The Sullia Mirror YouTube Channel
ನಿಂತಿದೆ. ತಮಿಳುನಾಡಿನ ಮಧುರೈನಿಂದ ಇಲ್ಲಿಗೆ ಅಣತೆಗಳು ಬರುತ್ತವೆ. ಎರಡು-ಮೂರು ದಿನಗಳಿಂದ ಜನ ಅಣತೆಗಳನ್ನು ಅರಸಿ ಬರುತ್ತಿದ್ದಾರೆ, ಮಣ್ಣಿನ ಅಣತೆಗಳಿಗೆ ಬೇಡಿಕೆ ಅಧಿಕ ಎನ್ನುತ್ತಾರೆ ಅಣತೆ ವ್ಯಾಪಾರಿಗಳು. ದೀಪಾವಳಿಯ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ ಬಣ್ಣಬಣ್ಣದ ಗೂಡು ದೀಪಗಳು. ಫ್ಯಾನ್ಸಿ ಮತ್ತಿತರ ಅಂಗಡಿಗಳು ತುಂಬಾ ಬಣ್ಣ ಬಣ್ಣದ ಗೂಡು ದೀಪಗಳು ಮನ ಸೆಳೆಯುತಿದೆ. ಅಲ್ಲದೆ ವಿವಿಧ ಭಂಗಿಯ ಆಕಾಶ ಲ್ಯಾಂಪ್ಗಳು, ಗಾಳಿ ಪಟಗಳು, ಬಣ್ಣ ಬಣ್ಣದ ಲೈಟ್ಗಳು, ಬಣ್ಣದ
ಕ್ಯಾಂಡಲ್ಗಳು ಬಂದಿದೆ. ಹಬ್ಬದ ಸಂಭ್ರಮ ಹೆಚ್ಚಿಸಲು ಸುಳ್ಯ ನಗರದಲ್ಲಿ ಹಲವು ಪಟಾಕಿ ಅಂಗಡಿಗಳೂ ತೆರೆದಿವೆ. ನಗರದಲ್ಲಿ ಮಾತ್ರ 20ಕ್ಕೂ ಹೆಚ್ಚು ಪಟಾಕಿ ಅಂಗಡಿಗಳು ತೆರೆಯಲಾಗಿದೆ. ವೈವಿಧ್ಯಮಯ ಪಟಾಕಿಗಳು ತುಂಬಿದೆ. ಹಬ್ಬಕ್ಕಾಗಿ ಮಾರುಕಟ್ಟೆಗೆ ವಿವಿಧ ಬಗೆಯ ಹೂವುಗಳು, ಹಣ್ಣುಗಳು, ತರಕಾರಿಗಳು ಬಂದಿದೆ. ಬಟ್ಟೆ ಅಂಗಡಿಗಳು, ಇಲೆಕ್ಟ್ರಾನಿಕ್ಸ್, ಮೊಬೈಲ್ ಅಂಗಡಿಗಳು ಸೇರಿ ಎಲ್ಲಾ ವಾಣೀಜ್ಯ ಮಳಿಗೆಗಳು ವಿಶೇಷ ಆಫರ್ಗಳನ್ನು ಘೋಷಿಸಿ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ.
ಮುಖ್ಯವಾಗಿ ಮೂರು ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬದ ಅಂಗವಾಗಿ ಬಲಿಯೇಂದ್ರ ಪೂಜೆ, ಲಕ್ಷ್ಮೀ ಪೂಜೆ, ಗೋ ಪೂಜೆ, ಅಂಗಡಿಗಳಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಹಲವೆಡೆ ಕಲಾ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳು ಜನಾಕರ್ಷಣೆ ಪಡೆಯಲಿದೆ.