ಸುಳ್ಯ: ಕೇವಲ 6 ತಿಂಗಳಲ್ಲಿ ಮಕ್ಕಳ ಉಡುಪುಗಳ ಮಾರಾಟದಲ್ಲಿ ಟ್ರೆಂಡ್ ಸೃಷ್ಠಿಸಿರುವ ಸುಳ್ಯದ ಮಕ್ಕಳ ಉಡುಪುಗಳ ‘ಎಕ್ಸ್‌ಕ್ಲೂಸಿವ್ ಶೋ ರೂಂ’ ಸುಳ್ಯ ಶ್ರೀರಾಂ ಪೇಟೆಯ ಶ್ರೀ ಹರಿ ಕಾಂಪ್ಲೆಕ್ಸ್‌ನ ‘ಗೋಕುಲಂ ಕಿಡ್ಸ್’ ವೇರ್‌ನಲ್ಲಿ ದೀಪಾವಳಿಯ ಸಂಭ್ರಮ. ಮಕ್ಕಳ ಉಡುಪುಗಳ ಖರೀದಿಗೆಂದೇ ಹೊಸ ಲೋಕ ಸೃಷ್ಠಿಸಿದ ಮಕ್ಕಳ ಈ ‘ನಂದ ಗೋಕುಲ’ದಲ್ಲಿ ದೀಪಗಳ ಹಬ್ಬದ ಪ್ರಭೆ ಹೆಚ್ಚಿಸಲು ಆಕರ್ಷಕ ಕಲೆಕ್ಷನ್ಸ್‌ಗಳ
ವರ್ಣ ಲೋಕವೇ ತೆರೆದುಕೊಂಡಿದೆ. ಹಬ್ಬದ ಸಂಭ್ರಮಕ್ಕೆ ಮೆರುಗು ನೀಡಲು ಭರ್ಜರಿ ದರ ಕಡಿತ ಮಾರಾಟವನ್ನೂ ಘೋಷಿಸಿದೆ. ಪ್ರತಿ ಉಡುಪುಗಳ ಮೇಲೂ ಶೇ.15ರವರೆಗೆ ದರ ಕಡಿತ ನೀಡುತ್ತಿದ್ದು ಅ.21ರಿಂದ ದೀಪಗಳ ಹಬ್ಬದ ಭರ್ಜರಿ ಫೆಸ್ಟಿವಲ್ ಸೇಲ್ ಆರಂಭವಾಗಿದೆ. ಅ.21ರಿಂದ 27 ರ ತನಕ ವಾರಗಳ ಕಾಲ ದೀಪಾವಳಿ ಹಬ್ಬದ ದರ ಕಡಿತ ಮಾರಾಟ ಇರಲಿದೆ. ಪ್ರಮುಖ ಕಂಪೆನಿಗಳ ಅತ್ಯಾಧುನಿಕ ಡಿಸೈನ್‌ಗಳ ಫ್ಯಾಷನ್ ಉಡುಪುಗಳ ಅಮೋಘ ಸಂಗ್ರಹ
ಗೋಕುಲಂ ಮಳಿಗೆ ಪೂರ್ತಿ ವರ್ಣ ವಸ್ತ್ರಗಳ ಚಿತ್ತಾರ ಬಿಡಿಸಿದೆ. ಅತ್ಯಂತ ಆಕರ್ಷಕ ಬಣ್ಣ ಮತ್ತು ಫ್ಯಾಷನ್‌ನ ಎಲ್ಲಾ ಮಾದರಿಯ ವೈವಿಧ್ಯಮಯ ಉಡುಪಗಳು ಬಂದಿದೆ. 0-15 ವರ್ಷದವರೆಗಿನ ವಿವಿಧ ಪ್ರಾಯದ ಮಕ್ಕಳಿಗೆ ಮ್ಯಾಚ್ ಆಗುವ, ಪೋಷಕರ ಮನಸ್ಸಿಗೆ ಖುಷಿ ಕೊಡುವ ಅತ್ಯಾಕರ್ಷಕ ಮಕ್ಕಳ ಉಡುಪುಗಳ ಸಂಗ್ರಹಗಳು ಕೈ ಬೀಸಿ
ಕರೆಯುತಿದೆ..ವಿವಿಧ ಕಂಪೆನಿಗಳ ಗುಣಮಟ್ಟದ ಬ್ರಾಂಡೆಡ್ ಉಡುಪುಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಮನಸ್ಸಿಗೆ ಒಪ್ಪುವ ಆಯ್ಕೆಗೆ ಅವಕಾಶವಿದೆ. ಎಂದು ಗೋಕುಲಂನ ಪಾಲುದಾರರು ತಿಳಿಸಿದ್ದಾರೆ. ಕಳೆದ ಮೇ.20 ರಂದು ಸುಳ್ಯದಲ್ಲಿ ಗೋಕುಲಂ ಕಿಡ್ಸ್ ವೇರ್ ಆರಂಭಗೊಂಡಿತು. ಉತ್ತಮ ಗುಣಮಟ್ಟದ ಉಡುಪುಗಳನ್ನು ನೀಡುವ ಮೂಲಕ ಗೋಕುಲಂ ಗ್ರಾಹಕರ ಮನ ಗೆದ್ದಿದೆ.