ನವದೆಹಲಿ: ಬೃಹತ್ ಮೊತ್ತ ಬೆನ್ನಟ್ಟಿ ಕೊನೆಯ ತನಕ ಹೋರಾಟ ನಡೆಸಿದ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಪಂದ್ಯದಲ್ಲಿ 10 ರನ್ಗಳ ರೋಚಕ ಜಯ ಸಾಧಿಸಿತು.ದೆಹಲಿ ತಂಡ ಮೊದಲು ಬ್ಯಾಟ್ ಮಾಡಿ
ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 257 ರನ್ ಪೇರಿಸಿತು. ಗುರಿ ಬೆನ್ನಟ್ಟಿ ತೀವ್ರ ಹೊರಾಟ ನಡೆಸಿದ ಮುಂಬೈ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿತು. ಮುಂಬೈ ಪರ ತಿಲಕ್ ವರ್ಮ 32 ಎಸೆತಗಳಲ್ಲಿ 63, ಹಾರ್ದಿಕ್ ಪಾಂಡ್ಯ 24 ಎಸೆತಗಳಲ್ಲಿ 46, ಟಿಂ ಡೇವಿಡ್ 17 ಎಸೆತಗಳಲ್ಲಿ 37 ರನ್ ಬಾರಿಸಿದರು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಪರ ಜೆಯ್ಕ್ ಫ್ರೆಸರ್ ಮಕ್ಗುರ್ಕ್ 27 ಎಸೆತಗಳಲ್ಲಿ 84, ಟ್ರಿಸ್ಟನ್ ಸ್ಟಬ್ಸ್ 25 ಎಸೆತಗಳಲ್ಲಿ 48, ಶಾಯ್ ಹೋಪ್ 17 ಎಸೆತಗಳಲ್ಲಿ 41 ರನ್ ಸಿಡಿಸಿದರು.