ನವದೆಹಲಿ: ಲೋಕಸಭಾ ಚುನಾವಣೆಗೆ ಇಂದು ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಕಾಂಗ್ರೆಸ್ ಬಿಡುಗಡೆಗೊಳಿಸಿದ ಆರನೇ ಪಟ್ಟಿಯಲ್ಲಿ ತಮಿಳುನಾಡಿನ
ಒಂದು ಕ್ಷೇತ್ರ ಹಾಗೂ ರಾಜಸ್ಥಾನದ ನಾಲ್ಕು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದು ಅದರಂತೆ ಒಟ್ಟು ಐದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.ಅಜ್ಮೀರ್ –ರಾಮಚಂದ್ರ ಚೌಧರಿ (ರಾಜಸ್ಥಾನ), ರಾಜಸಮಂದ್ – ಸುದರ್ಶನ್ ರಾವತ್ (ರಾಜಸ್ಥಾನ), ಭಿಲ್ವಾರ ಡಾ ದಾಮೋದರ್ ಗುರ್ಜರ್ (ರಾಜಸ್ಥಾನ), ಕೋಟ – ಪ್ರಹ್ಲಾದ್ ಗುಂಜಾಲ್ (ರಾಜಸ್ಥಾನ), ತಿರುನೆಲ್ವೇಲಿ – ಸಿ ರಾಬರ್ಟ್ ಬ್ರೂಸ್ (ತಮಿಳುನಾಡು).