ಸಂಪಾಜೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ನೇತೃತ್ವದಲ್ಲಿ ಸಂಪಾಜೆ ಗ್ರಾಮದ ಗೂನಡ್ಕ ದರ್ಕಾಸ್ ಪೇರಡ್ಕ ಬೂತ್ ಸಂಖ್ಯೆ 224 ಮತ್ತು 225 ರಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ನಡೆಸಲಾಯಿತು. ಬೂತ್ ಸಂಖ್ಯೆ 224 ಮನೆ ಮನೆ ಭೇಟಿ ನೀಡಿ
ಪಕ್ಷದ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪೂಜಾರಿಗೆ ಅವರಿಗೆ ಮತ ನೀಡಲು ವಿನಂತಿಸಿದರು. ಈ ಸಂದರ್ಭದಲ್ಲಿ ಹಿರಿಯರಾದ ಪಿ ಎ ಉಮ್ಮರ್ ಹಾಜಿ ಗೂನಡ್ಕ,ಅಬೂಸಾಲಿ ಗೂನಡ್ಕ,ಶೌವಾದ ಗೂನಡ್ಕ,ರವಿಚಂದ್ರ ಗೂನಡ್ಕ, ಅವಿನಾಶ್ ಗೂನಡ್ಕ,ಮತ್ತಿತರು ಉಪಸ್ಥಿತರಿದ್ದರು.
ಬೂತ್ ಸಂಖ್ಯೆ 225ರಲ್ಲಿ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಲಾಯಿತು. ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಉಪಾಧ್ಯಕ್ಷರಾದ ಎಸ್ ಕೆ ಹನೀಫ್, ಮಾಜಿ ಅಧ್ಯಕ್ಷರುಗಳಾದ ಜಿ ಕೆ ಹಮೀದ್ ಗೂನಡ್ಕ, ಸುಂದರಿ ಮುಂಡಡ್ಕ,ಯಮುನಾ ಬಿ ಎಸ್,ಉಸ್ತುವಾರಿ ರಹೀಮ್ ಬೀಜದಕಟ್ಟೆ, ಪಂಚಾಯತ್ ಸದಸ್ಯೆ ಅನುಪಮ, ಹಿರಿಯರಾದ ಕುಂಞಿ ಕಣ್ಣನ್, ನಾರಾಯಣ ಕೆ ಎಸ್ ಹನೀಫ್ ಕಡೆಪಾಲ ಮೊದಲಾದವರು ಉಪಸ್ಥಿತರಿದ್ದರು.