ಸುಳ್ಯ:ದೇಶದ ಆಡಳಿತ ನೀತಿ ರೂಪಣೆಯಲ್ಲಿ ಯುವ ಜನತೆಗೆ ದೊಡ್ಡ ಪಾತ್ರ ಇದೆ. ಶೆ.65 ಇರುವ ಯುವ ಜನತೆ ದೇಶದ ದೊಡ್ಡ ಆಸ್ತಿ. ಇವರನ್ನು ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಬೇಕು. ದೇಶದ ಬದಲಾವಣೆಗೆ ಯುವ ಜನತೆ ಮುನ್ನುಡಿ ಬರೆಯಬೇಕು ಎಂದು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿಗೆ ಆಗಮಿಸಿದ ಅವರು
ಮೆಡಿಕಲ್ ಕಾಲೇಜು ಹಾಗೂ ವಿವಿಧ ಕಾಲೇಜುಗಳ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ಅತ್ಯಂತ ಅನನ್ಯವಾದ ಜಿಲ್ಲೆ. ಈ ಜಿಲ್ಲೆಯ ಜನರ, ಯುವಕರ ಆಸೆ ಆಕಾಂಕ್ಷೆಗಳಿಗೆ, ಕಲ್ಪನೆಗಳಿಗೆ ತಕ್ಕಂತೆ ಕೆಲಸ ಮಾಡುತ್ತೇನೆ. ದೂರ ದೃಷ್ಠಿಯಿಂದ ಯೋಜನೆ ರೂಪಿಸುತ್ತೇನೆ ಎಂದು ಅವರು ಹೇಳಿದರು. ಯುವಜನತೆ ಮತ್ತು ಮಹಿಳೆಯರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ರವೀಂದ್ರ ಶೆಟ್ಟಿ ಉಳಿದೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೆಡಿಕಲ್ ಕಾಲೇಜಿಗೆ ಆಗಮಿಸಿದ ಚೌಟ ಅವರನ್ನು ಸ್ವಾಗತಿಸಲಾಯಿತು.