ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 27 ರನ್ಗಳಿಂದ ಮಣಿಸಿತು. ಇದರೊಂದಿಗೆ ಪ್ಲೇಆಫ್ ಪ್ರವೇಶಕ್ಕೆ ಮತ್ತಷ್ಟು ಸನಿಹ ಬಂದು ನಿಂತಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 167 ರನ್ಗಳನ್ನು ಪೇರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ
ತಂಡಕ್ಕೆ 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 140 ರನ್ ಗಳಿಸಲಷ್ಟೇ ಸಾಧ್ಯವಾಯಿತು.ಚೆನ್ನೈ ತಂಡದ ಅನುಭವಿ ಬೌಲರ್ ದೀಪಕ್ ಚಾಹರ್ (28ಕ್ಕೆ2) ಹಾಗೂ ಯುವ ಬೌಲರ್ ಮಥೀಷ್ ಪಥಿರಾಣ (37ಕ್ಕೆ3) ಅಮೋಘ ಬೌಲಿಂಗ್ ಮಾಡಿದರು. ಡೆಲ್ಲಿ ಪರ ರಿಲಿ ರೊಸೊ (35; 37ಎ) ಅಲ್ಪ ಪ್ರತಿರೋಧ ತೋರಿದರು.
ಚೆನ್ಐ ಸೂಪರ್ ಕಿಂಗ್ಸ್ ತಂಡದ ಅಗ್ರಕ್ರಮಾಂಕದ ಬ್ಯಾಟರ್ಗಳು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ನಾಯಕ ಧೋನಿ 9 ಎಸೆತಗಳಲ್ಲಿ 20 ರನ್ ಗಳಿಸಿದ ಅವರ ಆಟದಿಂದ ಚೆನ್ನೈ ಹೋರಾಟದ ಮೊತ್ತ ಗಳಿಸಿತು.
ಡೆಲ್ಲಿ ಸ್ಪಿನ್ನರ್ ಅಕ್ಷರ್ ಪಟೇಲ್ (27ಕ್ಕೆ2) ಹಾಗೂ ಮಧ್ಯಮವೇಗಿ ಮಿಚೆಲ್ ಮಾರ್ಷ್ (18ಕ್ಕೆ3) ಅವರ ಉತ್ತಮ ಬೌಲಿಂಗ್ನಿಂದಾಗಿ ಚೆನ್ನೈ ತಂಡದ ಬ್ಯಾಟರ್ಗಳು ರನ್ ಗಳಿಸಲು ಕಷ್ಟಪಟ್ಟರು. . ಅಜಿಂಕ್ಯ ರಹಾನೆ (21; 20ಎ) , ಶಿವಂ ದುಬೆ (25; 12ಎ) ಹಾಗೂ ಅಂಬಟಿ ರಾಯುಡು (23; 17ಎ) ಇನಿಂಗ್ಸ್ಗೆ ಬಲ ತುಂಬಲು ಪ್ರಯತ್ನಿಸಿದರು.