ಬೆಂಗಳೂರು: ಚಂದ್ರಯಾನ-3 ಗಗನನೌಕೆಯನ್ನು ಚಂದ್ರನ ಇನ್ನೊಂದು ಕಕ್ಷೆಗೆ ಇಳಿಸುವಲ್ಲಿ ಇಸ್ರೊ ವಿಜ್ಞಾನಿಗಳು ಯಶಸ್ವಿಯಾಗಿದ್ದು, ನೌಕೆ ಚಂದ್ರನ ಮೇಲ್ಮೈಗೆ ಇನ್ನಷ್ಟು ಸನಿಹಕ್ಕೆ ಬಂದಿದೆ.ಜುಲೈ 14ರಂದು ನೌಕೆಯನ್ನು ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಮಾಡಲಾಗಿದ್ದು, ಮೂರು
ಭೂಮಿಯ ಚಿತ್ರ
ಚಂದ್ರನ ಚಿತ್ರ
ವಾರಗಳ ಕಾಲ ಯಶಸ್ವಿಯಾಗಿ ಪರಿಭ್ರಮಿಸಿದ ನಂತರ ಆಗಸ್ಟ್ 5ರಂದು ನೌಕೆ ಚಂದ್ರನ ಕಕ್ಷೆ ತಲುಪಿತ್ತು. ಆಗಸ್ಟ್ 6 ರಂದು LHVC ಯಿಂದ ತೆಗೆದ ಚಿತ್ರವನ್ನು ಇಸ್ರೋ ಬಿಡುಗಡೆ ಮಾಡಿದ್ದು, ಜುಲೈ 14 ರಂದು ತೆಗೆದ ಭೂಮಿಯ ಚಿತ್ರ ಹಾಗೂ ಆಗಸ್ಟ್ 6 ರ ಚಿತ್ರವನ್ನು ಜೊತೆಯಾಗಿ ಪ್ರಕಟಿಸಿದೆ.
ಚಂದ್ರನ ಕಕ್ಷೆ ತಲುಪಿದ ನಂತರ ನೌಕೆಯ ವೇಗವನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬಂದಿರುವ ಇಸ್ರೊ, ಆಗಸ್ಟ್ 23ರ ವೇಳೆಗೆ ಚಂದ್ರನ ಮೇಲೆ ಸಾಫ್ಟ್ ಲ್ಯಾಡಿಂಗ್ ಮಾಡಲು ನಿರ್ಧರಿಸಿದೆ.