ಸುಳ್ಯ: ಸುಳ್ಯ ಕೆ.ಎಸ್.ಆರ್.ಟಿ.ಸಿ ಡಿಪ್ಪೊ ವತಿಯಿಂದ ಗ್ರಾಮೀಣ ಭಾಗಕ್ಕೆ ಹೆಚ್ಚುವರಿ 4 ಬಸ್ ರೂಟ್ ಒಸಗಿಸಬೇಕು ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಕೆಲವು ಭಾಗಗಳಿಗೆ ಶಾಲಾ ದಿನಗಳಲ್ಲಿ ಮಾತ್ರ ಬಸ್ ಓಡಾಟ ನಡೆಸುವುದು ಕಂಡು ಬಂದಿದೆ. ಶಾಲೆಗಳು ಇಲ್ಲದ
ದಿನಗಳಲ್ಲಿ ಬಸ್ ಓಡಾಟವನ್ನು ನಿಲ್ಲಿಸುತ್ತಿದ್ದಾರೆ. ಸರಕಾರಿ ಬಸ್ಸನ್ನೇ ಅವಲಂಬಿಸುತ್ತಿರುವ ಪ್ರಯಾಣಿಕರಿಗೆ,ಇದರಿಂದಾಗಿ ತೊಂದರೆಯಾಗುತ್ತಿದೆ. ಆದುದರಿಂದ ಮುಂದಿನ ದಿನಗಳಲ್ಲಿ ವಾರದ ಎಲ್ಲಾ ದಿನಗಳಲ್ಲಿ ಕೂಡ ಬಸ್ ಸಂಚಾರ ನಿಯಮಿತವಾಗಿ ಓಡಾಡಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಅಲ್ಲದೆ ಸುಳ್ಯ ಡಿಪೋದಿಂದ ಮಡಪ್ಪಾಡಿಗೆ ಪ್ರತಿದಿನ ಸಂಜೆ 6.30ಕ್ಕೆ ಸುಳ್ಯದಿಂದ ಹೊರಟು ಮಡಪ್ಪಾಡಿಯಲ್ಲಿ ತಂಗಿ, ಮರುದಿನ ಬೆಳಿಗ್ಗೆ 7:30ಕ್ಕೆ ಬಸ್ ಸಂಚಾರ ಪ್ರಾರಂಭಿಸಬೇಕು.
ಸುಳ್ಯ ದಿಂದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ತನಕ ಹೊಸದಾಗಿ ಬಸ್ ಸಂಚಾತ
ಪ್ರಾರಂಭಿಸಬೇಕು.
ಸುಳ್ಯ ದಿಂದ ಪಂಜ ಮೂಲಕ ಬೆಳಿಗ್ಗೆ ಗಂಟೆ 8.30ಕ್ಕೆ ಕಡಬಕ್ಕೆ ಮತ್ತು ಸಂಜೆ 400ಕ್ಕೆ ಕಡಬ ದಿಂದ ಹೊರಟು ಪಂಜ ಮೂಲಕ ಸುಳ್ಯಕ್ಕೆ ಹೊಸದಾಗಿ ಬಸ್ ಸಂಚಾರ ಪ್ರಾರಂಭಿಸಬೇಕು.
ಸುಳ್ಯ ದಿಂದ ಬೆಳಿಗ್ಗೆ ಗಂಟೆ 8.00ಕ್ಕೆ ಮತ್ತು ಮಧ್ಯಾಹ್ನ 1.30ಕ್ಕೆ ಸಂಜೆ ಗಂಟೆ 5 ಕ್ಕೆ ಸುಳ್ಯ ದಿಂದ ಬಡ್ಡಡ್ಕಕ್ಕೆ ಹೊಸದಾಗಿ ಪ್ರಾರಂಭಿಸಬೇಕೆಂದು ಮನವಿ ಸಲ್ಲಿಸಲಾಗಿದೆ.