ಸುಳ್ಯ:ಅಂಜಲಿ ಮೊಂಟೆಸ್ಸರಿ ಸ್ಕೂಲ್ನಲ್ಲಿ ನೀಲಿ ಬಣ್ಣದ ದಿನ ಆಚರಿಸಲಾಯಿತು.ನೀಲಿ ಬಣ್ಣವು ನಂಬಿಕೆ , ನಿಷ್ಠೆ , ಬುದ್ದಿವಂತಿಕೆ, ವಿಶ್ವಾಸ, ಸತ್ಯ ಮತ್ತು ಸ್ವರ್ಗವನ್ನು ಸೂಚಿಸುತ್ತದೆ.ಅದೇ ರೀತಿ ನೀಲಿ ಬಣ್ಣವನ್ನು ಶಾಂತಿಯುತ ಎಂದು ಪರಿಗಣಿಸಲಾಗಿದೆ.ನೀಲಿ ಬಣ್ಣದ ಆಚರಣೆಯ ಜೊತೆಗೆ ನೀಲಿ ಬಣ್ಣದ ಆಕಾಶ , ನೀಲಿ ಬಣ್ಣದ ಮೋಡ ,ನೀಲಿ ಬಣ್ಣದ ಗ್ಲೋಬ್ ಬಗ್ಗೆ ಸಂಸ್ಥೆಯ ಸಂಚಾಲಕಿ ಗೀತಾಂಜಲಿ ವಿವರಿಸಿದರು. ಪುಟಾಣಿ ವಿದ್ಯಾರ್ಥಿಗಳು ನೀಲಿ ಬಣ್ಣದ ಬಟ್ಟೆ ಧರಿಸಿ ರಾಂಪ್ ವಾಕ್ ಮಾಡಿದರು.ಸಂಸ್ಥೆಯ ಶಿಕ್ಷಕರು ಮತ್ತು ಮಕ್ಕಳು ನೀಲಿ ಬಣ್ಣದ ಬಟ್ಟೆ ಧರಿಸಿ ಸಂಭ್ರಮಿಸಿದರು.