ಸುಳ್ಯ: ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಕ್ಯಾ ಬ್ರಿಜೇಶ್ ಚೌಟ ಅವರ ಪರ ಪ್ರಚಾರ ಮತ್ತು ಹಿರಿಯರ ಭೇಟಿ ಕಾರ್ಯಕ್ರಮ
ಸುಳ್ಯ ವಿಧಾನಸಭಾ ಕ್ಷೇತ್ರದ ಕೊಡಿಯಾಲ ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆಯಿತು. ಬಿಜೆಪಿಯ ಹಿರಿಯ ಕಾರ್ಯಕರ್ತರಾದ
ಕರುಣಾಕರ ರೈ, ಮೋಹನ್ ಸಾಲಿಯಾನ್ , ಅಜರಂಗಳ ಐತ್ತಪ್ಪ ರೈ ಯವರನ್ನು ಭೇಟಿ ಮಾಡಿ ಗ್ರಾಮದಲ್ಲಿ ಚುಣಾವಣೆಯ ಬೂತ್ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.ಸಂದರ್ಭದಲ್ಲಿ ಶಾಸಕರಾದ ಭಾಗೀರಥಿ ಮುರುಳ್ಯ,
ಸುಳ್ಯ ಮಂಡಲ ಪ್ರಭಾರಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಾಜಿ ವಿಧಾನ ಪರಿಷತ್ ಸದಸ್ಯ,ರಾಜ್ಯ ಕಾರ್ಯಕಾರಣಿ ಸದಸ್ಯ ಮೊನಪ್ಪ ಭಂಡಾರಿ,ಸುಳ್ಯ ಮಂಡಲ ಲೋಕಾಸಭಾ ಚುನಾವಣಾ ಉಸ್ತುವಾರಿ ಹರೀಶ್ ಕಂಜಿಪಿಲಿ, ಪ್ರಮುಖರಾದ ಎಸ್, ಎನ್, ಮನ್ಮಥ, ಪದ್ಮನಾಭ ಬೂಡು,ವಸಂತ ನಡುಬೈಲು, ಪ್ರಸಾದ್ ಕಾಟೂರು,
ಹರೀಶ ಕಲ್ಪನೆ, ಧೀರೇಶ್ ನಡುಬೈಲು, ಉಪಸ್ಥಿತರಿದ್ದರು.