ಸುಳ್ಯ: ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ದಿ.ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಅವರ ತಂದೆ- ತಾಯಿಯ ಆಶೀರ್ವಾದ ಪಡೆದರು. ಈ ಹಿಂದೆ ಪಕ್ಷ ಮತ್ತು ಸರಕಾರ ನಿಮ್ಮ ನೋವಿನ ಸಂದರ್ಭದಲ್ಲಿ
ಯಾವ ರೀತಿಯಲ್ಲಿ ಸ್ಪಂದನೆ ಮಾಡಿತ್ತೊ ಹಾಗೆಯೇ ನಾನು ಕೂಡ ನಿಮ್ಮ ಮನೆಯ ಮಗಳಾಗಿ ನಿಮ್ಮೊಂದಿಗೆ ಇದ್ದು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಸ್.ಎನ್. ಮನ್ಮಥ, ವಿನಯಕುಮಾರ್ ಮುಳುಗಾಡು,ವಸಂತ ನಡುಬೈಲು,ಶ್ರೀನಾಥ್ ಬಾಳಿಲ, ಚಂದ್ರಶೇಖರ ಪನ್ನೆ, ಪುಷ್ಷಾವತಿ ಬಾಳಿಲ,ಪದ್ಮನಾಭ ಬೂಡು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.