ಸುಳ್ಯ:ಪಂಜದಲ್ಲಿ ನಡೆದ ಹಿರಿಯರ ಕ್ರೀಡಾ ಕೂಟದಲ್ಲಿ ಚಕ್ರ ಎಸೆತ, ಜಾವಲಿನ್ ಎಸೆತ ಹಾಗೂ ಗುಂಡು ಎಸೆತದಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದ ಸುಳ್ಯ ಬಂಟರ ಸಂಘದ ಸದಸ್ಯೆ ಸರಿತಾ ನಾಗೇಶ್ ಶೆಟ್ಟಿ ಯವರನ್ನು ಸಂಘದ ಮಾಸಿಕ ಸಭೆಯಲ್ಲಿ ಸನ್ಮಾನಿಸಲಾಯಿತು. ಹಿರಿಯರಾದ
ಕಮಲಾಕ್ಷಿ ಶೆಟ್ಟಿ ಸನ್ಮಾನಿಸಿ ಗೌರವಿಸಿದರು. ಬಂಟರ ಸಂಘದ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಅಧ್ಯಕ್ಷತೆ ವಹಿಸಿದ್ದರು. ಡಿ. 31 ರಂದು ಸುಳ್ಯ ಬಂಟರ ಭವನದಲ್ಲಿ ನಡೆಯಲಿರುವ ವಾರ್ಷಿಕ ಸಮಾವೇಶದ ತಯಾರಿಯ ಮಾಹಿತಿ ನೀಡಿದರು. ವೇದಿಕೆಯಲ್ಲಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಶುಭಾಶ್ಚದ್ರ ರೈ, ಖಜಾಂಜಿ ಗಂಗಾಧರ ರೈ, ಆರಂತೋಡು ವಲಯಾಧ್ಯಕ್ಷ ಜೆ ಕೆ ರೈ, ಜಾಲ್ಸೂರು ವಲಯಧ್ಯಕ್ಷ ಶಿವರಾಮ ರೈ, ಬಾಳಿಲ ವಲಯಧ್ಯಕ್ಷ ಕರುಣಾಕರ ರೈ, ದಯಕರ ರೈ ನಾವೂರು, ಕುಸುಮಾಧರ ರೈ, ಮಹಿಳಾಧ್ಯಕ್ಷೆ ಇಂದಿರಾ ರೈ, ಕಮಲಾಕ್ಷಿ ಶೆಟ್ಟಿ ಸುನಂದ ಶೆಟ್ಟಿ ಸ್ವಾಗತಿಸಿದರು. ಸುಭಾಶ್ಚಂದ್ರ ರೈ ವಂದಿಸಿ, ಚಂದ್ರಾಕ್ಷಿ ಜೆ ರೈ ಕಾರ್ಯಕ್ರಮ ನಿರೂಪಿಸಿದರು.