ಜಾಲ್ಸೂರು: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಆಶ್ರಯದಲ್ಲಿ ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಭಾ ಭವನದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು
ಪುತ್ತೂರಿನ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಅಗಮಿಸಿದ್ದಾರೆ. ಜಾಲ್ಸೂರಿಗೆ ಆಗಮಿಸಿದ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ನೂರಾರು ಕಾರ್ಯಕರ್ತರು, ನಾಯಕರು ಸೇರಿ ಸ್ವಾಗತಿಸಿದರು. ಪೇಟ ತೊಡಿಸಿ, ಹೂ ಹಾರ
ಹಾಕಿ, ಹೂವಿನ ಎಸಳಿನ ಹೂಮಳೆಗರೆದು ಸ್ವಾಗತಿಸಿದರು. ಚೆಂಡೆ, ವಾದ್ಯ ಮೇಳದಗಳೊಂದಿಗೆ, ಪಟಾಕಿ, ಸಿಡಿಮದ್ದಿನ ಅಬ್ಬರದೊಂದಿಗೆ ಸ್ವಾಗತಿಸಲಾಯಿತು. ಬಳಿಕ ಜಾಲ್ಸೂರಿನಿಂದ ಅಡ್ಕಾರು ದೇವಸ್ತಾನದ ತನಕ ತೆರೆದ ವಾಹನದಲ್ಲಿ ಅದ್ದೂರಿ ಮೆರವಣಿಗೆಯಾಗಿ ಕಾರ್ಯಕ್ರಮ
ನಡೆಯುವ ಅಡ್ಕಾರು ದೇವಸ್ಥಾನಕ್ಕೆ ಆಗಮಿಸಿದರು. ನೂರಾರು ವಾಹನಗಳು ಮೆರವಣಿಗೆಯಲ್ಲಿ ಭಾಗವಹಿಸಿದರು. ಸಭಾಭವನಕ್ಕೆ ಆಗಮಿಸಿದ ಅವರನ್ನು ಹೂಹಾರ ಹಾಕಿ, ಹೂಮಳೆಗರೆದು, ಆರತಿ ಬೆಳಗಿ ಸ್ವಾಗತಿಸಲಾಯಿತು. ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ಪುತ್ತಿಲ ವೇದಿಕೆಗೆ ಆಗಮಿಸಿ ಭಾರತ್ ಪೂಜನ ಕಾರ್ಯಕ್ರಮ ನೆರವೇರಿಸಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.