ಸುಳ್ಯ: ಸುಳ್ಯದ ಮಾರ್ನಿಂಗ್ ಕ್ರಿಕೆಟ್ ಕ್ಲಬ್ನ ನೂತನ ಕಚೇರಿ ಸುಳ್ಯ ಪ್ರೆಸ್ ಕ್ಲಬ್ ಕಟ್ಟಡದಲ್ಲಿ ಜೂ.4 ರಂದು ಉದ್ಘಾಟನೆಗೊಂಡಿತು. ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ಬಾಳ್ ಕಚೇರಿಯನ್ನು ಉದ್ಘಾಟಿಸಿದರು. ಮಾರ್ನಿಂಗ್
ಕ್ತಿಕೆಟ್ ಕ್ಲಬ್ನ ಅಧ್ಯಕ್ಷ ಗಿರೀಶ್ ಅಡ್ಪಂಗಾಯ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್ ಕ್ಲಬ್ ಉಪಾಧ್ಯಕ್ಷ ಜೆ.ಕೆ.ರೈ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಮುಖ್ಯ ಅತಿಥಿಯಾಗಿದ್ದರು. ಎಂಸಿಸಿ ಕಾರ್ಯದರ್ಶಿ ಸಂತೋಷ್ ಕುಮಾರ್ ಜಟ್ಟಿಪಳ್ಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಇಸಾಕ್ ವಂದಿಸಿದರು. ಎಂಸಿಸಿ ಸ್ಥಾಪಕಾಧ್ಯಕ್ಷ ಹಂಸ ಕಾತೂನ್, ಪತ್ರಕರ್ತರಾದ ದಯಾನಂದ ಕಲ್ನಾರ್, ಶರೀಫ್ ಜಟ್ಟಿಪಳ್ಳ, ಎಂಸಿಸಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.