ಅರಂತೋಡು: ಅರಂತೋಡು ಗ್ರಾಮದ ಬೂತ್ ನಂಬ್ರ 216 ರಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಹಾಗೂ ಮನವಿ ಪತ್ರ ಮನೆ ಮನೆ ತಲುಪಿಸುವ ಮೂಲಕ ಚುನಾವಣಾ ಪ್ರಚಾರ ಕೈಗೊಳ್ಳಲಾಯಿತು. ಕೆಪಿಸಿಸಿ ಮುಖ್ಯ ವಕ್ತಾರ ಹಾಗೂ ಕೆಪಿಸಿಸಿ ಬೆಳ್ತಂಗಡಿ ವಿಧಾನಸಭಾ ಕೆಪಿಸಿಸಿ ಉಸ್ತುವಾರಿ ಟಿ ಎಂ ಶಾಹಿದ್ ತೆಕ್ಕಿಲ್ ನೇತೃತ್ವದಲ್ಲಿ
ಪ್ರಚಾರ ಕಾರ್ಯ ನಡೆಯಿತು. ತಾಜುದ್ದೀನ್ ಅರಂತೋಡು, ಝುಬೈರ್ ಎಸ್ ಇ, ಮುಝಮ್ಮಿಲ್ ಅರಂತೋಡು, ಆಶೀಕ್ ಕುಕ್ಕುಂಬಳ ಉಪಸ್ಥಿತರಿದ್ದರು. ದಿನಪೂರ್ತಿ 45 ಮನೆಗಳಿಗೆ ಭೇಟಿ ನೀಡಲಾಯಿತು. ಉಚಿತ ಕರೆಂಟ್ ನೀಡುವ ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಗ್ಗೆ ಮತದಾರರಿಗೆ ವಿವರಿಸಿದರು.
ಶಾಸಕರಾಗಿ ಜಿ ಕೃಷ್ಣಪ್ಪ ರಾಮಕುಂಜ ಆಯ್ಕೆಯಾದರೆ ಅರಂತೋಡಿನ ಅಭಿವೃದ್ಧಿಗೆ ಹತ್ತು ಕೋಟಿ ಅನುದಾನ, ಗ್ರಾಮೀಣ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಮತ್ತಿತರ ಅಭಿವೃದ್ಧಿ ಕೆಲಸ ಪಕ್ಷದ ನಾಯಕರ ಸಹಕಾರದೊಂದಿಗೆ ಮಾಡಲಾಗುವುದು ಎಂದು ಟಿ ಎಂ ಶಾಹಿದ್ ತೆಕ್ಕಿಲ್ ಭರವಸೆ ನೀಡಿದರು.