*ಪಿ.ಜಿ.ಎಸ್.ಎನ್.ಪ್ರಸಾದ್.
ಅಪರಾಹ್ನ 2 ರ ವೇಳೆಗಾಗಲೇ ಕವಿದ ಕಾರ್ಮೋಡ. ನಡುಕ ಹುಟ್ಟಿಸಿದ ಗುಡುಗು ಸಿಡಿಲು. ನಿರೀಕ್ಷೆಗೂ ಮೀರಿದ ಭರ್ಜರಿ ಮಳೆ.. ಸುಳ್ಯ, ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಒಂದು ಗಂಟೆಯ ಅವಧಿಯಲ್ಲಿ ವರುಣನಾಡಿದ ಆಟ..ಶತಕಕ್ಕೂ ಮೀರಿದ್ದು. ಅನೇಕ ಕಡೆ ಮಳೆಯೊಂದಿಗೆ ಆಲಿಕಲ್ಲು ಸಹಿತ ಉತ್ತಮ ಮಳೆ. ನಿನ್ನೆ ಸಾಧಾರಣ ಮಳೆ ಬರಬಹುದು ಎಂಬ
ಮುನ್ಸೂಚನೆ ಇತ್ತಷ್ಟೆ.. ಆದರೆ ನಡೆದದ್ದೇ ಬೇರೆ…. ಸಂಜೆ 6.30 ರ ಬಳಿಕ ದ್ವಿತೀಯ ಸುತ್ತಿನ ಹದವರಿತ ಆಟವೂ ನಡೆಯಿತು.! ಗುಡುಗು, ಸಿಡಿಲಿನ ಅಬ್ಬರದ ನಡುವೆ ಮಳೆಗಾಲವನ್ನು ನೆನಪಿಸುತ್ತಿದ್ದ ಕಾರ್ಗತ್ತಲ ವಾತಾವರಣದಲ್ಲಿ ಮೇಘಗಳು ಧೋ ಎಂದು ಧರೆಗಿಳಿದವು.. ಇದರಿಂದ ಹಲವು ಕಡೆಗಳಲ್ಲಿ ನೂರಕ್ಕೂ ಅಧಿಕ ಮಿ.ಮಿ.ಮಳೆಯಾಗಿದೆ ಎಂಬುದು ವಿಶೇಷ. ಬಳ್ಪ- ಪಟೋಳಿ 131, ಕೇನ್ಯ 122, ಎಣ್ಮೂರು 120, ಎಣ್ಮೂರು-ಅಲೆಂಗಾರ 109, ಬಳ್ಪ 106 .. ಶತಕದಾಟ !
ದೇವರಮಜಲು-ಎಡಮಂಗಲ 99, ಕಡಬ-ಕೋಡಿಂಬಳ 98, ಮುರುಳ್ಯ 86, ಬೆಳ್ಳಾರೆ- ಕಾವಿನಮೂಲೆ 85, ಕಮಿಲ 78, ಬಾಳಿಲ (ಉತ್ತರ) 77 ಅಯ್ಯನಕಟ್ಟೆ (ಬಾಳಿಲ ಪಶ್ಚಿಮ) 74, ಬಾಳಿಲ (ದಕ್ಷಿಣ) 73, ಕರಿಕ್ಕಳ 75, ಕಡಬ 73, ಪಂಬೆತ್ತಾಡಿ-ನೆಕ್ರಕಜೆ 60, ಕೊಳ್ತಿಗೆ-ಎಕ್ಕಡ್ಕ 55, ಸುಬ್ರಹ್ಮಣ್ಯ 54, ಪಾಣಾಜೆ- ಗಿಳಿಯಾಲು 42, ನಡುಗಲ್ಲು 42, CPCRI ಕಾಸರಗೋಡು 40, ಚೊಕ್ಕಾಡಿ, ಕಲ್ಲಾಜೆ ತಲಾ 34, ಕೀಲಾರ್ಕಜೆ-ದೊಡ್ಡತೋಟ 32, ಮುಂಡಾಜೆ 30, ಹರಿಹರ-ಮಲ್ಲಾರ 28, ಕೊಲ್ಲಮೊಗ್ರ 25, ಬೆಳ್ತಂಗಡಿ 24, ಸುಳ್ಯ ನಗರ 23, ನೆಲ್ಯಾಡಿ 15, ಮಡಪ್ಪಾಡಿ, ಮುಂಡೂರು, ಬೆಳ್ತಂಗಡಿ-ಚರ್ಚ್ ರಸ್ತೆ ತಲಾ 10, ಕುಂಬ್ಳೆ-ಎಡನಾಡು 25, ಅಡೆಂಜ-ಉರುವಾಲು 02 ಮಿ.ಮೀ.ನಷ್ಟು ಮಳೆಯಾಗಿದೆ. ಇಷ್ಟಾಗಿಯೂ ಕೈಲಾರು, ಕಂಪದಕೋಡಿ ಮುಂತಾದೆಡೆ ನಿನ್ನೆ ಮಳೆಯೇ ಬಂದಿಲ್ಲ..
ಮಳೆ ಇಂದೂ ಇರಲಿದೆ..ವರುಣನಾಟ ಇಂದೂ ಭರ್ಜರಿಯಾಗಿ ಮುಂದುವರಿಯುವ ಸೂಚನೆ ಇದೆ. ಈ ಬಾರಿ ಮುಂಗಾರು ಪೂರ್ವ ಸುರಿವ ಪ್ರತಿ ಮಳೆಯಲ್ಲೂ ಗಾಳಿ, ಗುಡುಗು, ಮಿಂಚು ಪ್ರಧಾನ ಪಾತ್ರ ವಹಿಸಲಿದೆ.. ಆದುದರಿಂದಲೇ ಭಾನುವಾರ ರಾತ್ರಿ, ನಿನ್ನೆ ಹಗಲಿನ ಸಿಡಿಲಾರ್ಭಟ ಹಲವರ ಮನೆಯ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಆಫೋಷನ ತೆಗೆದುಕೊಂಡಿದೆ. ಆದುದರುಂದ ಸಿಡಿಲಿನ ಬಗ್ಗೆ ಸಾಕಷ್ಟು ಎಚ್ಚರಿಕೆ ಮತ್ತು ಜಾಗೃತಿ ವಹಿಸಬೇಕಾಗಿದೆ..!
(ಲೇಖಕರು ಪ್ರಗತಿಪರ ಕೃಷಿಕರು, ಹವಾಮಾನ ಅಧ್ಯಯನಾಸಕ್ತರು. ಮಳೆ ದಾಖಲೆಗಾರರು)