The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ
The Sullia Mirror
  • ಮುಖಪುಟ
  • ಗ್ರಾಮೀಣ
  • ನಗರ
  • ತಾಲೂಕು
  • ಜಿಲ್ಲೆ
  • ರಾಜ್ಯ
  • ದೇಶ
  • ವಿದೇಶ
  • ಅಂಕಣ
  • ಸುಳ್ಯ ಮಿರರ್‌ Exclusive
  • ಇತರ
    • ರಾಜಕೀಯ
    • ಕ್ರೀಡೆ
    • ಸಾಂಸ್ಕೃತಿಕ

ಶಾಲಾ ಆವರಣ ಗೋಡೆಯಲ್ಲಿ ಅರಳಿದ ಅಮರ ಸುಳ್ಯ ಕ್ರಾಂತಿಯ ಇತಿಹಾಸ..:ಅಮೈ ಮಡಿಯಾರು ಶಾಲೆಯ ಆವರಣ ಗೋಡೆಯಲ್ಲಿ ಚಾರಿತ್ರಿಕ ಉಬ್ಬು ಶಿಲ್ಪಗಳು.

by ದಿ ಸುಳ್ಯ ಮಿರರ್ ಸುದ್ದಿಜಾಲ May 29, 2022
by ದಿ ಸುಳ್ಯ ಮಿರರ್ ಸುದ್ದಿಜಾಲ May 29, 2022
Share this article

*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಅಮರ ಸುಳ್ಯ ದಂಗೆಯ ರುವಾರಿ ಕೆದಂಬಾಡಿ ರಾಮಯ್ಯ ಗೌಡರ ಊರು ಉಬರಡ್ಕ ಮಿತ್ತೂರು ಗ್ರಾಮದ ಅಮೈ ಮಡಿಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆಯಲ್ಲಿ ಈ ಚಾರಿತ್ರಿಕ ಘಟನೆಯು ಶಿಲ್ಪಗಳಾಗಿ ಅರಳಿವೆ. ಉಬ್ಬು ಶಿಲ್ಪಗಳು ರಚಿಸುವ ಕೆಲಸ ಮುಗಿದಿದ್ದು ಅಂತಿಮ ಹಂತದ ಕುಸುರಿ ಕೆಲಸ ಬಣ್ಣ ಹಚ್ಚುವ ಕೆಲಸಗಳು ಉಳಿದಿದೆ. ಕೆಲವೇ ದಿನಗಳಲ್ಲಿ ಚಾರಿತ್ರಿಕ ಘಟನೆಯೊಂದು ಉಬ್ಬು ಶಿಲ್ಪಗಳಾಗಿ ಮನ ಸೂರೆಗೊಳ್ಳಲಿದೆ.
1837ರಲ್ಲಿ ಬ್ರಿಟೀಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟ ಅಮರ ಸುಳ್ಯ ಕ್ರಾಂತಿಯ ಕುರಿತಾದ ಚರಿತ್ರೆಗಳನ್ನು ಹಲವು ಮಂದಿ ಲೇಖಕರು, ಇತಿಹಾಸಕಾರರು ಸಂಶೋಧನೆ ನಡೆಸಿ ವಿವಿರವಾಗಿ ಪುಸ್ತಕ ರೂಪದಲ್ಲಿ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ದಾಖಲಿಸಿದ್ದಾರೆ.ಈ ಸ್ವಾತಂತ್ರ್ಯ ಹೋರಾಟದ ಚರಿತ್ರೆಯು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗಬೇಕು ಎಂಬ ನೆಲೆಯಲ್ಲಿ ಈ ಇತಿಹಾಸದ ಸಾಲುಗಳನ್ನು ಉಬ್ಬು ಶಿಲ್ಪದ ಮೂಲಕ ದಾಖಲಿಸುವ ಪ್ರಯತ್ನ ನಡೆಸಲಾಗಿದೆ. ಉಬರಡ್ಕ ಮಿತ್ತೂರಿನ ಮದುವೆಗದ್ದೆ ದಾಮೋದರ ಗೌಡರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ‘ಜ್ಞಾನಧಾಮ ಚಾರಿಟೇಬಲ್ ಟ್ರಸ್ಟ್’ ಊರ ಜನರ ಸಹಕಾರದಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನ ನಡೆಸುತಿದೆ. ಅದರ ಭಾಗವಾಗಿ ಶಾಲೆಗೆ ದ್ವಾರ ಮತ್ತಿತರ ಅಭಿವೃದ್ಧಿ ನಡೆಸಲಾಗಿದ್ದು ಇಲ್ಲಿ ಇನ್ನಷ್ಟು ಆಕರ್ಷಕವಾಗಬೇಕು ಎಂಬ ನೆಲೆಯಲ್ಲಿ ಶಾಲೆಯ ಆವರಣ ಗೋಡೆಯಲ್ಲಿ ಸಿಮೆಂಟಿನ ಉಬ್ಬು ಚಿತ್ರಗಳನ್ನು ರಚಿಸಲಾಗಿದೆ.ಇತ್ತೀಚೆಗೆ ಬಿಡುಗಡೆಗೊಂಡ ಸಾಹಿತಿ ಕೆ. ಆರ್.ವಿದ್ಯಾಧರ ಕುಡೆಕಲ್ಲು ಅವರ ” ಅಮರಸುಳ್ಯ 1837 ಸಶಸ್ತ್ರ ಹೋರಾಟ ” ಕೃತಿಯನ್ನಾಧರಿಸಿ ಹಿರಿಯ ಸಾಹಿತಿ ,ಚಿತ್ರಕಾರ ಎ.ಕೆ ಹಿಮಕರ ಅವರು ರಚಿಸಿದ ರೇಖಾಚಿತ್ರದ ಆಧಾರದಲ್ಲಿ

ಉಬ್ಬುಶಿಲ್ಪ ಕಲಾವಿದರಾದ ಕಾಸರಗೋಡು ಜಿಲ್ಲೆಯ ಮಹೇಶ ಬಾಯಾರು ಸಿಮೆಂಟಿನಲ್ಲಿ ಉಬ್ಬು ಶಿಲ್ಪಗಳನ್ನು ರಚಿಸಿದ್ದಾರೆ.
ಅತ್ಯಂತ ಸರಳವಾಗಿ ಈ ಘಟನೆಯ ಕುರಿತು ಬೆಳಕು ಚೆಲ್ಲುವ 14 ಶಿಲ್ಪಗಳು ರಚನೆಯಾಗಿದೆ. ಎ.ಕೆ. ಹಿಮಕರ ಅವರ ಕಲ್ಪನೆಯ ಚಿತ್ರಕ್ಕೆ ಶಿಲ್ಪಿ ಮಹೇಶ್ ಬಾಯಾರು ಮೂರ್ತರೂಪ ನೀಡಿದ್ದಾರೆ. ಶಿಲ್ಪಗಳು ಈಗಾಗಲೇ ರಚನೆಯಾಗಿದೆ. ಮಡಿಕೇರಿಯ ಅರಮನೆಯಿಂದ ಬ್ರಿಟೀಷರು ಕೊನೆಯ ಅರಸನನ್ನು ಅರಮನೆಯಿಂದ ಹೊರಗಟ್ಟುವ ದೃಶ್ಯ, ಕೆದಂಬಾಡಿಗೆ ಪುಟ್ಟ ಬಸವನನ್ನು ಕರೆತರುವ, ಪೂಮಲೆ ಕಾಡಿನಲ್ಲಿ ಸಮಾಲೋಚನೆ, ಆಶ್ರಮ ಕಟ್ಟಿ ಪುಟ್ಟ ಬಸವನನ್ನು ಕಲ್ಯಾಣ ಸ್ವಾಮಿಯಾಗಿ ಮಾರ್ಪಾಡು ಮಾಡುವ, ಮದುವೆಗದ್ದೆಯಿಂದ ದಂಡು ಹೊರಡುವ, ಸೈನಿಕರ ಜಮಾವಣೆ, ಬೆಳ್ಳಾರೆ ಕೋಟೆ ಸ್ವಾಧೀನಪಡಿಸುವ, ಅಟ್ಲೂರು ರಾಮಪ್ಪಯ್ಯನಿಗೆ ಮರಣದಂಡನೆ ವಿಧಿಸುವ, ಮಂಗಳೂರು ಕೋಟೆ ಸ್ವಾಧೀನಪಡಿಸಿ ಧ್ವಜಾರೋಹಣ ಮಾಡುವ, ಕಲ್ಯಾಣ ಸ್ವಾಮಿ ಮತ್ತಿತರರನ್ನು ಗಲ್ಲಿಗೇರಿಸುವ, ಹೋರಾಟಗಾರರನ್ನು ಹಡಗಿನಲ್ಲಿ ತುಂಬಿ ವಿದೇಶಕ್ಕೆ ಗಡಿ ಪಾರು ಮಾಡುವ.. ಹೀಗೆ ಅಮರ ಸುಳ್ಯ ದಂಗೆಯ ಪ್ರಮುಖ ಘಟನೆಗಳು ಶಿಲ್ಪದ ರೂಪದಲ್ಲಿ ಮೂಡಿ ಬಂದಿದೆ. ಆ ಮೂಲಕ ಅಮರ ಸುಳ್ಯ ಕ್ರಾಂತಿಯ ಇತಿಹಾಸವನ್ನು ತಿಳಿಸುವ ಪ್ರಯತ್ನ ಇದಾಗಿದೆ.

“ಇತಿಹಾಸವನ್ನು ಸುಲಭವಾಗಿ ಜನರಿಗೆ ಮುಟ್ಟಿಸುವ ಪ್ರಯತ್ನ ಇದು. ಅಮರ ಕ್ರಾಂತಿಯ ಬಗ್ಗೆ ಡಾ. ಪುರುಷೋತ್ತಮ ಬಿಳಿಮಲೆ, ಸಾಹಿತಿ ಅರವಿಂದ ಚೊಕ್ಕಾಡಿ ಹಾಗೂ ಕೆ.ಆರ್.ವಿದ್ಯಾಧರ ಕುಡೆಕಲ್ಲು ಇವರ ಪುಸ್ತಕಗಳು ಮತ್ತೆ ಇತಿಹಾಸಕಾರರ ಗಮನ ಪೂಮಲೆಯ ಸುತ್ತಕ್ಕೆ ಸೆಳೆದಿದೆ.
ಅದಲ್ಲದೇ ಸರಕಾರ ಈ ಹೋರಾಟದ ರೂವಾರಿ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯನ್ನು ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಸ್ಥಾಪಿಸಲಾಗುತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ

ಸಂದರ್ಭದಲ್ಲಿ ಅಮರ ಸುಳ್ಯ ಕ್ರಾಂತಿ ಎಲ್ಲಡೆ ಚರ್ಚೆಯಗುತಿದೆ. ಇವೆಲ್ಲದರ ನಡುವೆ ಕೆದಂಬಾಡಿ ರಾಮಯ್ಯಗೌಡರ ಹುಟ್ಟೂರಿನಲ್ಲಿ ಶಿಲ್ಪಗಳಾಗಿ ಅರಳಿದೆ ಎನ್ನುತ್ತಾರೆ ಸಾಹಿತಿ ಎ.ಕೆ.ಹಿಮಕರ.ಚಿತ್ರಗಳು ಬಹುಬೇಗ ಮನಸ್ಸನ್ನು ಸೆಳೆಯುತ್ತದೆ. ಈ ಹಿನ್ನಲೆಯಲ್ಲಿ ಇಲ್ಲಿ ಚಾರಿತ್ರಿಕ ಘಟನೆಗಳು ಉಬ್ಬು ಶಿಲ್ಪಗಳಾಗಿ ಅರಳಿ ವಿದ್ಯಾರ್ಥಿಗಳಿಗೆ ಇತಿಹಾಸ ಹೇಳಿದಂತಾಗುತ್ತದೆ. ಎನ್ನುತ್ತಾರವರು.

ದಿ ಸುಳ್ಯ ಮಿರರ್ ಸುದ್ದಿಜಾಲ

ದಿ ಸುಳ್ಯ ಮಿರರ್‌ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್‌ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್‌ ಮಾಡಿರಿ.

next post
ಪಟಪಟನೆ ಉದುರುತ್ತಿರುವ ಅಡಿಕೆ ನಳ್ಳಿ: ಕೈಗೆ ಬಂದ ತುತ್ತು ಬಾಯಿಗೆ ಇಲ್ಲಾ.. ಶೇ.30 ರಷ್ಟು ಅಡಿಕೆ ಫಸಲು ನಾಶ.!

You may also like

ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ:...

June 4, 2023

ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ: ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ...

June 4, 2023

ಕಲ್ಲುಗುಂಡಿ: ಬರೆಯುವ ಪುಸ್ತಕ ವಿತರಣೆ, ಸನ್ಮಾನ

June 4, 2023

ಅರೆಭಾಷೆ ರಸಾಯನ: ಐತಾರದ ಪೊಳ್ಮೆ.. ಪೂರಾ ಹೆಳ್ಮಕ್ಕಳಿಗೆ ಕೊಟ್ಟರೆ ಗಳ್ಮಕ್ಕಳಿಗೆ...

June 4, 2023

ಸರಕಾರದ ಗ್ಯಾರಂಟಿ ಯೋಜನೆ: ಯುವ ನಿಧಿ, ಅನ್ನಭಾಗ್ಯ ಯೋಜನೆಗಳ ಮಾರ್ಗಸೂಚಿ...

June 3, 2023

ಜೂ.10ರಂದು ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಮಾಜಿ ಸಚಿವ...

June 3, 2023

5 ಗ್ಯಾರಂಟಿ ಯೋಜನೆಗಳಂತಹಾ ಜನಪರ ಕಾರ್ಯಕ್ರಮ ನೀಡಲು ಕಾಂಗ್ರೆಸ್‌ನಿಂದ ಮಾತ್ರ...

June 3, 2023

ಬಾಲಸೋರ್ ರೈಲು ಅಪಘಾತ: ಮೃತರ ಸಂಖ್ಯೆ 233 ಕ್ಕೆ, 900...

June 3, 2023

ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ 10 ಲಕ್ಷ ರೂ.,...

June 2, 2023

ಒಡಿಶಾದ ಬಾಲಸೋರ್​​ನಲ್ಲಿ ರೈಲು ಅಪಘಾತ: 50 ಮಂದಿ ಸಾವು: 300...

June 2, 2023

Leave a Comment Cancel Reply

ಇತ್ತೀಚಿನ ಸುದ್ದಿಗಳು

  • ಸಿಎಸ್​ಕೆ ಸ್ಟಾರ್ ಬ್ಯಾಟರ್ ಋತುರಾಜ್ ಗಾಯಕ್ವಾಡ್​- ಉತ್ಕರ್ಷ ಪವಾರ್ ಮದುವೆ ಸಂಭ್ರಮ
  • ಕೇರಳದ ನರ್ಸ್‌ಗೆ ಒಲಿದ 45 ಕೋಟಿಯ ಅಬುಧಾಬಿ ಬಿಗ್ ಟಿಕೆಟ್ ಲಾಟರಿ ಅದೃಷ್ಟ
  • ಹಿಂದುತ್ವಕ್ಕಾಗಿ, ಸಮಾಜದ ಉಳಿವಿಗಾಗಿ ಯಾವ ತ್ಯಾಗಕ್ಕೂ ಸಿದ್ಧ:ಅರುಣ್ ಕುಮಾರ್ ಪುತ್ತಿಲ: ಲೋಕ‌ ಕಲ್ಯಾಣಾರ್ಥವಾಗಿ ಶ್ರೀ ಸತ್ಯನಾರಾಯಣ ಪೂಜೆ-ಧಾರ್ಮಿಕ ಸಭೆ
  • ಜಾಲ್ಸೂರಿಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ: ಅದ್ದೂರಿ ಸ್ವಾಗತ- ವೈಭವದ ಮೆರವಣಿಗೆ
  • ಮಾರ್ನಿಂಗ್ ಕ್ರಿಕೆಟ್‌ ಕ್ಲಬ್ ನೂತನ ಕಚೇರಿ ಉದ್ಘಾಟನೆ

ನಮ್ಮ ಬಗ್ಗೆ

ದಿ ಸುಳ್ಯ ಮಿರರ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು,ಮಾನವಸಾಕ್ತ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

ಇ-ಮೇಲ್ ಐಡಿ: thesulliamirror@gmail.com
ದೂರವಾಣಿ ಸಂಖ್ಯೆ: 9008417480

ನಮ್ಮೊಂದಿಗೆ ಸಂಪರ್ಕದಲ್ಲಿರಿ

Facebook Twitter Whatsapp

2023 - Sullia Mirror. Website made with 🧡 by The Web People.

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ

NEWS UPDATES ಪಡೆಯಲು ನಮ್ಮ ಗುಂಪಿನ ಕೊಂಡಿ