ಸುಳ್ಯ: ಆಮ್ ಆದ್ಮಿ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಮನೆ-ಮನೆ ಭೇಟಿ ಕಾರ್ಯಕ್ರಮ, ಕಾರ್ನರ್ ಮೀಟಿಂಗ್ ನಡೆಸಲಾಯಿತು. ಅಲಂಗಾರು, ಕೊಯಿಲ, ಕುಂತೂರು ಹಾಗೂ ಪೆರಾಬೆ ಪ್ರದೇಶದಲ್ಲಿ ಪ್ರಚಾರ ಕೈಗೊಂಡರು. ಆಪ್ ಅಭ್ಯರ್ಥಿ
ಸುಮನಾ ಬೆಳ್ಳಾರ್ಕರ್ , ಜಿಲ್ಲಾಧ್ಯಕ್ಷರಾದ ಅಶೋಕ ಎಡಮಲೆ, ಪ್ರಚಾರ ಸಮಿತಿ ಅಧ್ಯಕ್ಷ ರಶೀದ್ ಜಟ್ಟಿಪಳ್ಳ ವಿವಿಧ ಕಡೆಗಳಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಸುಂದರ ಪೂಜಾರಿ ಆಲಂಗಾರು, ಆನಂದ ಗೌಡ ರಾಮಕುಂಜ, ಕಲಂದರ್ ಎಲಿಮಲೆ, ಗುರುಪ್ರಸಾದ್ ಮೇರ್ಕಜೆ, ರಾಮಕೃಷ್ಣ ಬೀರಮಂಗಲ, ಇಸ್ಮಾಯಿಲ್ ಕೊಯಿಲ, ಯಾಕೂಬ್ ಕೋಯಿಲ, ಸತ್ತಾರ್ ಅಜ್ಜಾವರ, ಗೋಪಾಲ್ ಇರಂತಮಜಲು, ಕಲಂದರ್ ಶಾಫಿ, ಸುರೇಶ್ ಮುಂಡಕಜೆ, ಸಂಶುದ್ದೀನ್ ಕೆಎಂ, ವಸಂತ ಬೆಳ್ಳಾರೆ, ಸಿಂಚನ ಬೆಳ್ಳಾರೆ ಹಾಗೂ ಹಲವಾರು ಕಾರ್ಯಕರ್ತರು ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಸಂಧರ್ಭದಲ್ಲಿ ಹಲವಾರು ಮಂದಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.