ಸುಳ್ಯ: ಹುಬ್ಬಳಿಯಲ್ಲಿ ಕಾಲೇಜು ಆವರಣದಲ್ಲಿ ನೇಹಾ ಎಂಬ ವಿದ್ಯಾರ್ಥಿನಿಯ ಹತ್ಯೆ ಘಟನೆಯನ್ನು ಬಿಜೆಪಿ ಯುವ ಮೋರ್ಚಾ ಖಂಡಿಸುತ್ತದೆ. ಆರೋಪಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲು ಆಗ್ರಹಿಸುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ಹೇಳಿದರು. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಡಹಗಲೇ
ಕೊಲೆಗಳು ನಡೆಯುವುದು ನೋಡುವಾಗ ಭಯದ ವಾತಾವರಣದಲ್ಲಿ ಬದುಕುವುದು ಹೇಗೆ ಎಂಬ ಸ್ಥಿತಿ ಇದೆ. ಈ ಕೃತ್ಯವನ್ನು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು. ನೋಟಾ ಅಭಿಯಾನ ಬಿಜೆಪಿ ಮತ ಬೇರ್ಪಡಿಸುವ ಷಡ್ಯಂತ್ರ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಅಡಿಕೆ ಎಲೆ ಹಳದಿ ರೋಗ ಈ ಭಾಗದ ದೊಡ್ಡ ಸಮಸ್ಯೆ. ಅದರ ಶಾಶ್ವತ ಪರಿಹಾರಕ್ಕೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟರು ಪ್ರಯತ್ನ ಪಡುತ್ತಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳಾದ ಸುನಿಲ್ ಕೇರ್ಪಳ, ಪ್ರದೀಪ್ ಕೊಲ್ಲರಮೂಲೆ, ಅಭಿಷೇಕ್ ತೊಡಿಕಾನ, ಜಗದೀಶ್ ಜಯನಗರ,ಲತೀಶ್ ಗುಂಡ್ಯ, ರಾಜೇಶ್ ಕಿರಿಭಾಗ, ನಿಕೇಶ್ ಉಬರಡ್ಕ, ಕೌಶಲ್ ಸುಳ್ಯ, ನಿಖಿಲ್ ಐವರ್ನಾಡು ಮೊದಲಾದವರು ಇದ್ದರು.