ಲಖನೌ:ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಮತ್ತು ಕುಸಲ್ ಮೆಂಡೀಸ್ ನೇತೃತ್ವದ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ.ಇದು ಸೋತವರ ಕಾಳಗ ಎನ್ನಬಹುದು. ಯಾಕೆಂದರೆ ಉಭಯ ತಂಡಗಳು ಇದುವರೆಗೆ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು
ಕಂಡಿದೆ. ಹೀಗಾಗಿ ಆಸೀಸ್-ಲಂಕಾ ತಂಡ ಮೊದಲ ಗೆಲುವಿಗಾಗಿ ಹಾತೊರೆಯುತ್ತಿದೆ.
ಸತತ ಸೋಲುಗಳಿಂದ ಕಂಗೆಟ್ಟಿರುವ ಶ್ರೀಲಂಕಾ ತಂಡಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಅಕ್ಟೋಬರ್ 10 ರಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಶ್ರೀಲಂಕಾದ ನಾಯಕ ದಸುನ್ ಶನಕ ಇದೀಗ ವಿಶ್ವಕಪ್ನಿಂದಲೇ ಹೊರಬಿದ್ದಿದ್ದಾರೆ. ಇಂಜುರಿಗೊಂಡಿರುವ ಶನಕ ಬದಲಿಗೆ ಬೌಲಿಂಗ್ ಆಲ್ರೌಂಡರ್ ಚಾಮಿಕಾ ಕರುಣಾರತ್ನ ಅವರನ್ನು ತಂಡಕ್ಕೆ ಮರು ಆಯ್ಕೆ ಮಾಡಲಾಗಿದೆ. ನಾಯಕನೇ ತಂಡದಿಂದ ಹೊರಬಿದ್ದಿರುವುದು ದೊಡ್ಡ ಹಿನ್ನಡೆಯಾಗಿದೆ. ಕುಸಲ್ ಮೆಂಡೀಸ್ ನಾಯಕತ್ವದಲ್ಲಿ ಲಂಕಾ ಹೇಗೆ ಪ್ರದರ್ಶನ ನೀಡುತ್ತೆ ಎಂಬುದು ನೋಡಬೇಕಿದೆ. ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾಖ್ಎ ವಿಶ್ವಕಪ್ ಕೂಟದಲ್ಲಿ ಆತ್ಮ ವಿಶ್ವಾಸದಿಂದ ಮುಂದುವರಿಯಲು ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.