ಫ್ಲೋರಿಡಾ: ನಾಲ್ಕನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಗೆಲುವಿಗೆ ವೆಸ್ಟ್ ಇಂಡೀಸ್ 179 ರನ್ಗಳ ಗುರಿ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್, ನಿಗದಿತ 20 ಓವರ್ಗಳಲ್ಲಿ
ಎಂಟು ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿದೆ. ವಿಂಡೀಸ್ ಪರ ಶಿಮ್ರಾನ್ ಹೆಟ್ಮೆಯರ್ 61 ರನ್ ಗಳಿಸಿದರು. ಶಾಯ್ ಹೋಪ್ 45 ರನ್ ಗಳಿಸಿ ಮಿಂಚಿದರು. ಕೇವಲ 35 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಹೆಟ್ಮೆಯರ್, ಸವಾಲಿನ ಮೊತ್ತ ಪೇರಿಸಲು ವಿಂಡೀಸ್ಗೆ ನೆರವಾದರು. ಕೈಲ್ ಮೇಯರ್ಸ್ 17, ಬ್ರಂಡನ್ ಕಿಂಗ್ 18 ರನ್ ಗಳಿಸಿದರು.
ಭಾರತದ ಪರ ಅರ್ಶದೀಪ್ ಸಿಂಗ್ ಮೂರು ಮತ್ತು ಕುಲದೀಪ್ ಯಾದವ್ ಎರಡು ವಿಕೆಟ್ ಗಳಿಸಿದರು.