ಪೈಚಾರ್: ಪೈಚಾರ್ ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಎ.20ರಿಂದ 23ರ ತನಕ ನಡೆಯಲಿದೆ. ಇದರ ಯಶಸ್ವಿಗೆ ಪ್ರಾರ್ಥಿಸಿ ಶಾಂತಿನಗರದ ಶ್ರೀ ಮುತ್ತಪ್ಪ ತಿರುವಪ್ಪ ಸನ್ನಿಧಿಯಲ್ಲಿ ಪೈಂಗುತ್ತಿ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ
ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಸುಂದರ್ ರಾವ್ ಉಪಾಧ್ಯಕ್ಷರಾದ ಚಿದಾನಂದ ವಿದ್ಯಾನಗರ,ಗೌತಮ್ ಸೇರ್ಕಜೆ, ಸಂಚಾಲಕರಾದ ರಾಜೇಶ್ ಮೇನಾಲ, ಕೋಶಾಧಿಕಾರಿ ಕೇಶವ ಮಾಸ್ತರ್.ಸಿ.ಎ, ಸಹ ಸಂಚಾಲಕ ನಾರಾಯಣ ಎಸ್ ಎಂ,ಗೌರವ ಮಾರ್ಗದರ್ಶಕರಾದ ದಾಮೋದರ ಮಂಚಿ, ಆನಂದ ಬೆಟ್ಟಂಪಾಡಿ,ಚಂದ್ರಹಾಸ, ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನದ ಅಧ್ಯಕ್ಷ ಮಧುಸೂದನ್ ಪಿ.ಎಂ., ಮೊಕ್ತೇಸರರಾದ ರಾಮಕೃಷ್ಣ ಎಸ್.ಎನ್ , ಚಂದ್ರಶೇಖರ ನೂಜಾಡಿ, ರಾಮಚಂದ್ರ ನಾಯ್ಕ, ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರರಾದ ಸಂಜೀವ, ಅಧ್ಯಕ್ಷ ವೇಣುಗೋಪಾಲ ಎಸ್, ಸದಸ್ಯರಾದ ರಾಧಾಕೃಷ್ಣ, ಬಾಬು, ಚಿದಾನಂದ, ಕರಿಯಪ್ಪ ಗೌಡ, ಗಿರೀಶ್, ಚರಣ್, ಸುನೀತ ಚಂದ್ರಶೇಖರ, ರಾಜಶ್ರೀ, ಭಾಗ್ಯಶ್ರೀ, ಪ್ರೇಮ ಮತ್ತಿತರರು ಉಪಸ್ಥಿತರಿದ್ದರು









