ಸುಳ್ಯ: ಮರ ಬಿದ್ದು ಸುಳ್ಯಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸುಳ್ಯಕ್ಕೆ ವಿದ್ಯುತ್ ಸರಬರಾಜಾಗುವ 33 ಕೆವಿ ವಿದ್ಯುತ್ ಲೈನ್ ಮೇಲೆ ಬೃಹತ್ ಮರ ಬಿದ್ದು ಸಂಪರ್ಕ ಕಡಿತಗೊಂಡಿದೆ. ಬೊಳುಬೈಲಿನಲ್ಲಿ ವಿದ್ಯುತ್ ಲೈನ್ ಮೇಲೆ
ಮರ ಬಿದ್ದಿದೆ ಎಂದು ತಿಳಿದು ಬಂದಿದೆ. ಲೈನ್ ಮೇಲೆ ಬಿದ್ದ ಮರ ತೆರವು ಮಾಡಿ ವಿದ್ಯುತ್ ಸಂಪರ್ಕ ಸರಿ ಪಡಿಸುವ ಕಾರ್ಯ ನಡೆಯುತಿದೆ.10 ಗಂಟೆಯ ವೇಳೆಗೆ ವಿದ್ಯುತ್ ಸಂಪರ್ಕ ಸರಿಪಡಿಸಲಾಗುವುದು ಎಂದು ಸುಳ್ಯದ ಮೆಸ್ಕಾಂ ಉಪ ವಿಭಾಗದ ಇಂಜಿನಿಯರ್ಗಳು ಮಾಹಿತಿ ನೀಡಿದ್ದಾರೆ.