ಸುಳ್ಯ: ಸುನ್ನಿ ಸಂಯುಕ್ತ ಜಮಾಹತ್ ಸಮಿತಿ ಸುಳ್ಯ ಇದರ 2024.25ನೆ ಸಾಲಿನ ಮಹಾಸಭೆ ಹಾಗೂ ಖಾಝಿ ಕೂರತ್ ತಂಙಳ್ ಅವರ ಅನುಸ್ಮರಣೆ ಕಾರ್ಯಕ್ರಮ ಗಾಂಧಿನಗರ ಸುಳ್ಯ ಸಭಾಂಗಣದಲ್ಲಿ ನಡೆಯಿತು ಅಬ್ದುಸಮದ್ ಹಾಜಿ ಮೋಗರ್ಪಣೆ ಅಧ್ಯಕ್ಷತೆ ವಹಿಸಿದ್ದರು. ಗಾಂಧಿನಗರ ಮದರಸ
ಸದರ್ ಉಸ್ತಾದ್ ಸಿರಾಜುದ್ದೀನ್ ಸಖಾಫಿ ದುವಾ ನೆರವೇರಿಸಿದರು. ಜಾಫರ್ ಸಅದಿ ಖತೀಬ್ ಜೆ.ಎಂ ನಿಂತಿಕಲ್ಲು ಉದ್ಘಾಟಿಸಿದರು
ಅಶ್ರಫ್ ಖಾಮಿಲ್ ಸಖಾಫಿ ಖತೀಬ್ ಜೆಎಂ ಗಾಂಧಿನಗರ ಅನುಸ್ಮರಣಾ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಉಮ್ಮರ್ ಸೀಗೆಯಡಿ ವರದಿ ಮತ್ತು ಜಮಾ ಖರ್ಚನ್ನುಮಂಡಿಸಿದರು.ನಂತರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.15 ಜಮಾಹತಿನ ಖತೀಬ್ ಉಸ್ತಾ ದರುಗಳ ಸಲಹಾ ಸಮಿತಿ ಮತ್ತು 47 ಸದಸ್ಯರ ಸಮಿತಿಯನ್ನು ರಚಿಸಲಾಯಿತು.
ಮಹಮ್ಮದ್ ಕುಂಞಿ ಗೂನಡ್ಕ, ಅಬ್ದುಲ್ ಹಮೀದ್ ಬೀಜಕೊಚ್ಚಿ, ಹಾಜಿ ಕೆ.ಎಂ.ಮುಸ್ತಫಾ
ಅಧ್ಯಕ್ಷರಾಗಿ ಮಹಮ್ಮದ್ ಕುಂಞಿ ಗೂನಡ್ಕ,ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಬೀಜಕೊಚ್ಚಿ ಸುಳ್ಯ,ಕೋಶಾಧಿಕಾರಿಯಾಗಿ ಹಾಜಿ ಕೆ.ಎಂ.ಮುಸ್ತಫಾ
ಉಪಾಧ್ಯಕ್ಷರುಗಳಾಗಿ ಉಮರ್ ಸೀಗೆಯಡಿ. ಅಬೂಬಕ್ಕರ್ ಪೆರಾಜೆ. ಇಸ್ಮಾಯಿಲ್ ಸಹದಿ ಕುಂಭಕೋಡು. ಅಬ್ದುಲ್ ರೆಹಮಾನ್ ಮೊಗರ್ಪಣೆ
ಕಾರ್ಯದರ್ಶಿಗಳಾಗಿ ಕೆಎಂ ಅಬ್ದುಲ್ ಹಮೀದ್ ಸುಣ್ಣ ಮೂಲೆ. ಹಸೈನಾರ್ ವಳಲಂಬೆ ಗುತ್ತಿಗಾರು. ವೈ ಕೆ ಸುಲೇಮಾನ್ ಹಾಜಿ ಇಂದ್ರಾಜೆ, ಕೆಎಚ್ ಉಮರ್ ಮೇನಾಲ,
ಹಾಗೂ 36 ಮಂದಿ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು
ಸುನ್ನೀ ಸಂಯುಕ್ತ ಜಮಾಹತ್ ಪ್ರಧಾನ ಕಾರ್ಯದರ್ಶಿ ಉಮರ್ ಸೀಗೆಯಡಿ ಸ್ವಾಗತಿಸಿದರು ಕೆ ಎಂ ಅಬ್ದುಲ್ ಹಮೀದ್ ಸುಣ್ಣ ಮೂಲೆ ಕಾರ್ಯಕ್ರಮ ನಿರೂಪಿಸಿದರು.