ಸುಳ್ಯ:ನಿರಂತರ 4 ದಿನಗಳ ಕಾಲ ಸುರಿದ ಭರ್ಜರಿ ಮಳೆಯ ಬಳಿಕ ಶುಕ್ರವಾರ ಬೆಳಿಗ್ಗಿನಿಂದ ಮಳೆಗೆ ಸ್ವಲ್ಪ ಬಿಡುವು ಸಿಕ್ಕಿದೆ.
ಸುಳ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭರ್ಜರಿ ಮಳೆ ಸುರಿದಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಯಲ್ಲಿ ಸುಳ್ಯ ನಗರದಲ್ಲಿ 214 ಮಿ.ಮಿ. ಮಳೆಯಾಗಿದೆ ಎಂದು
ಮಳೆ ನೀರು ದಾಖಲೆಗಾರರಾದ ಶ್ರೀಧರ ರಾವ್ ಮಾಹಿತಿ ನೀಡಿದ್ದಾರೆ. ಮಂಡೆಕೋಲಿನಲ್ಲಿ 211 ಮಿ.ಮಿ.ಮಳೆಯಾಗಿದೆ ಬಹುತೇಕ ಕಡೆಗಳಲ್ಲಿ ಮಳೆ ಶತಕ ದಾಖಲಿಸಿದೆ. ಕಟ್ಟ ಗೋವಿಂದ ನಗರದಲ್ಲಿ 151 ಮಿ.ಮಿ, ಚೊಕ್ಕಾಡಿ 160 ಮಿ.ಮಿ, ನಡುಗಲ್ಲು 143 ಮಿ.ಮಿ, ಬಳ್ಪ 108 ಮಿ.ಮಿ, ಕಲ್ಮಡ್ಕ ಗ್ರಾ ಕಾಚಿಲ 118 ಮಿ.ಮಿ,ದೊಡ್ಡತೋಟದ ಬಳಿ ಕೀಲಾರ್ ಕಜೆಯಲ್ಲಿ
197, ವಾಲ್ತಾಜೆ ಕಂದ್ರಪಾಡಿ 187 ಮಿ.ಮಿ, ಬಳ್ಪ ಪಠೋಳಿ 104 ಮಿ.ಮಿ,ಮಿ.ಮೀ, ಮುರುಳ್ಯ ಗ್ರಾಮದ ಶೇರದಲ್ಲಿ 103 ಮಿ.ಮಿ,ಉಬರಡ್ಕದಲ್ಲಿ 200 ಮಿ.ಮಿ, ಮರ್ಕಂಜ ಮಾಪಳತೋಟದಲ್ಲಿ 158 ಮಿ.ಮಿ., ಎಡಮಂಗಲ ದೇರಮಜಲಿನಲ್ಲಿ 106 ಮಿ.ಮಿ, ಗುತ್ತಿಗಾರು ಮೆಟ್ಟಿನಡ್ಕ 182, ಬಾಳಿಲ (ಪೂರ್ವ) 120, ಅಯ್ಯನಕಟ್ಟೆ 118, ಸುಬ್ರಹ್ಮಣ್ಯ 113, ಹರಿಹರ ಮಲ್ಲಾರ 132, ಬಾಳಿಲ 119 ಮಿ.ಮಿ., ಕಲ್ಲಾಜೆ 149, ಕೇನ್ಯ 122 ಮಿ.ಮಿ. ಮಳೆ ಯಾಗಿದೆ.