ಸುಳ್ಯ:ಸಂಪಾಜೆ ಗ್ರಾಮದ ಹೈಸ್ಕೂಲ್ ಬಳಿಯಲ್ಲಿ ಮನೆಯ ಬಾವಿಯೊಂದು ದಿಢೀರ್ ಕುಸಿತಗೊಂಡಿರುವ ಘಟನೆ ವರದಿಯಾಗಿದೆ. ದಿಡೀರ್ ಬಾವಿ ಕುಸಿತ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಳೆಗೆ ಸಂಪಾಜೆ ಗ್ರಾಮದಲ್ಲಿ ಹಲವು ಆವಾಂತರ ಉಂಟಾಗಿದೆ. ಗೂನಡ್ಕದ ಶಾಲೆ ಬಳಿ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿತ್ತು. ಚಟ್ಟೆಕಲ್ಲು ಮನೆಗೆ ಹಾನಿ ಸಂಭವಿಸಿತ್ತು. ಗೂನಡ್ಕ ದರ್ಖಾಸ್ತು ಬಳಿ ತಡೆಗೋಡೆ ಕುಸಿತ ಉಂಟಾಗಿತ್ತು.