ಪೆರುವಾಜೆ: ಪೆರುವಾಜೆ ಡಾ.ಕೆ .ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಇಲ್ಲಿನ ಆಂತರಿಕ ಗುಣಮಟ್ಟ ಕೋಶ ಹಾಗೂ ಸ್ನಾತಕೋತ್ತರ ವೃತ್ತಿ ಕೋಶದ ವತಿಯಿಂದ ಒಂದು ದಿನದ ಸಾಫ್ಟ್ ಸ್ಕಿಲ್ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಸಂಪನ್ಮೂಲ ವ್ಯಕ್ತಿಗಳಾಗಿ
ಸವಣೂರು ವಿದ್ಯಾರಶ್ಮಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಹಾಗೂ ಮಂಗಳೂರು ಶ್ರೀನಿವಾಸ ವಿಶ್ವವಿದ್ಯಾನಿಲಯದ ಸಂಶೋಧನ ಪ್ರಾಧ್ಯಾಪಕರಾದವ ರಾಜೇಶ್ ಬೆಜ್ಜಂಗಳ ಭಾಗವಹಿಸಿದ್ದರು. ವ್ಯಕ್ತಿತ್ವ ವಿಕಸನದಲ್ಲಿ ಸಾಫ್ಟ್ ಸ್ಕಿಲ್ ಗಳ ಕೊಡುಗೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿತ್ತು . ವ್ಯಕ್ತಿಯ ವ್ಯಕ್ತಿಪರ ಬೆಳವಣಿಗೆಯಲ್ಲಿ ಪರಿಣಾಮಕಾರಿಯಾದ ಸಂವಹನೆ, ಸಮಯ ಪರಿಪಾಲನೆ ,ಸೃಜನಾತ್ಮಕ ಚಿಂತನೆ, ಸಹಭಾಗಿತ್ವದಲ್ಲಿ ಕೆಲಸ ಮಾಡುವ ಗುಣ ,ಆತ್ಮವಿಶ್ವಾಸ , ಧನಾತ್ಮಕ ಚಿಂತನೆ ಇತ್ಯಾದಿಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ಈ ತರಬೇತಿಯ ಮೂಲಕ ಮನದಟ್ಟು ಮಾಡಿಕೊಡಲಾಯಿತು . ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ದಾಮೋದರ ಕಣಜಾಲು ರವರು ವಹಿಸಿದ್ದರು . ಸ್ನಾತಕೋತ್ತರ ವೃತ್ತಿ ಕೋಶದ ಸಂಯೋಜಕರಾದ ಪ್ರತಿಮಾ ಉಪಸ್ಥಿತರಿದ್ದರು . ಎಂ.ಕಾಂ ವಿದ್ಯಾರ್ಥಿಗಳಾದ ದಿಲೀಪ್ ಕೆ. ಸ್ವಾಗತಿಸಿ ,ವಿಕ್ರಂ ಬಿ.ಎಸ್ ವಂದಿಸಿದರು ಚೈತ್ರ ಕೆ. ಕಾರ್ಯಕ್ರಮ ನಿರೂಪಿಸಿದರು .