ಮುರೂರು:ಮುರೂರಿನಿಂದ ಪಂಜಿಕಲ್ ಗಡಿಯ ತನಕ ಅಂತಾರಾಜ್ಯ ರಸ್ತೆಯ ಬದಿಯಲ್ಲಿನ ಕಾಡು ಪೊದೆಗಳನ್ನು ಸಾರ್ವಜನಿಕರು ಶ್ರಮದಾನದ ಮೂಲಕ ತೆರವು ಮಾಡಿದರು.ಮುರೂರು, ದೇವರಗುಂಡ, ಪಂಜಿಕಲ್ ಭಾಗದ

ಸಾರ್ವಜನಿಕರು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಪಂಜಿಕಲ್ ನಿಂದ ಮುರೂರು ತನಕ ರಸ್ತೆ ಬದಿ ಕಾಡು ಬಳ್ಳೆಗಳಿಂದ ಹಾಗೂ ಮರಗಳು ಬಿದ್ದಿರುವುದರಿಂದ ಸಾರ್ವಜನಿಕರಿಗೆ ಹಾಗೂ ಶಾಲೆ ಮಕ್ಕಳಿಗೆ ಹಾಗು ವಾಹನಗಳಿಗೆ ಪ್ರಯಾಣಿಸಲು ಮತ್ತು ನಡೆದಾಡಲು ಸಮಸ್ಯೆ ಎದುರಾಗಿತ್ತು. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಶ್ರಮದಾನದ ಮೂಲಕ ಕಾಡು ತೆರವು ಮಾಡಿದರು.









