ಸುಳ್ಯ:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ವಿಚಾರವಾಗಿ ಜಿಲ್ಲಾಡಳಿತದ ಕಠಿಣ ಕಾನೂನು ಕ್ರಮದಿಂದ ಬಡ, ಸಾಮಾನ್ಯ ಜನರಿಗೆ ಹೊರೆಯಾಗಿದ್ದು ಅನೇಕ ಕಟ್ಟಡ,ಮನೆಯ ಕಾಮಗಾರಿಗಳು ಕುಂಠಿತವಾಗಿದೆ. ಈ ಬಗ್ಗೆ ಸರ್ಕಾರ ವಿಶೇಷ ಗಮನ ಹರಿಸಿ ಕಾನೂನು ಸರಳೀಕರಣ ಮಾಡಬೇಕು ಎಂದು
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಒತ್ತಾಯಿಸಿದ್ದಾರೆ. ಕಠಿಣ ಕಾನೂನಿನಿಂದ ಮರಳು, ಕೆಂಪು ಕಲ್ಲು ಲಭ್ಯವಾಗದೆ ಜನ ಸಾಮಾನ್ಯರಿಗೆ ನಿರ್ಮಾಣ ಕೆಲಸಗಳಿಗೆ ತೀವ್ರ ಸಮಸ್ಯೆಯಾಗಿದೆ.
ಕೆಂಪು ಕಲ್ಲು ಮತ್ತು ಮರಳು, ನಿರ್ಮಾಣ ಕೆಲಸಗಳನ್ನು ನಂಬಿ ಅನೇಕ ಜನ ಬದುಕುತ್ತಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಕೂಡ ಹೊಡೆತ ನೀಡಿದಂತಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆ,ಕಟ್ಟಡ ಬಡವರು ಮನೆ ನಿರ್ಮಿಸಲು ಸಾಧ್ಯವಿಲ್ಲದ ಪರಿಸ್ತಿತಿ ಇದೆ. ಆದುದರಿಂದ ಜನ ಸಾಮಾನ್ಯರ ಕಾರ್ಮಿಕರ ಹಿತದೃಷ್ಟಿಯಿಂದ ಮರಳು,ಕೆಂಪು ಕಲ್ಲು ಪರವಾನಿಗೆ ಸಡಿಲಗೊಳಿಸಿ ಅನುಕೂಲ ಮಾಡಿಕೊಡುವಂತೆ ವೆಂಕಟ್ ವಳಲಂಬೆ ಪತ್ರಿಕಾ ಪ್ರಕಟಣೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.