ಹಾಂಗ್ಝೌ:ಭಾರತದ ಶೂಟರ್ಗಳು, ಏಷ್ಯನ್ ಕ್ರೀಡಾಕೂಟದಲ್ಲಿ ಶುಕ್ರವಾರ ಎರಡು ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ.
ಹಾಂಗ್ಝೌ ಶೂಟಿಂಗ್ ರೇಂಜ್ನಲ್ಲಿ ನಡೆದ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಭಾರತದ
ಪಾಲಕ್ ಗುಲಿಯಾ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಜತೆಗೆ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮಹಿಳಾ ತಂಡ ಇಶಾ ಸಿಂಗ್, ಪಾಲಕ್ ಗುಲಿಯಾ ಮತ್ತು ದಿವ್ಯಾ ಥಡಿಗೋಲ್ ಬೆಳ್ಳಿ ಪದಕ ಜಯಿಸಿದೆ. ಭಾರತದ ಐಶ್ವರಿ ತೋಮರ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆರಾನ್ ಅವರ 50 ಮೀಟರ್ ರೈಫಲ್ ಪುರುಷರ ತಂಡವು ಹೊಸ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.