ಮಂಗಳೂರು: ಜಿಲ್ಲೆಯ ನಾನ್ ಸಿಆರ್ಝಡ್ ಪ್ರದೇಶದಲ್ಲಿ ಮರಳು ಬ್ಲಾಕ್ಗಳನ್ನು ಗುರುತಿಸಿ ಇ-ಹರಾಜು ಪ್ರಕ್ರಿಯೆ ಮೂಲಕ ಗುತ್ತಿಗೆ ಮಂಜೂರಾತಿ ನೀಡಲಾಗಿದೆ. ಪ್ರಸ್ತುತ 23 ಮರಳು ಬ್ಲಾಕ್ಗಳ ಸ್ಟಾಕ್ಯಾರ್ಡ್ನಲ್ಲಿ ಲಭ್ಯವಿರುವ ಮರಳನ್ನು ಜಿಲ್ಲೆಯಲ್ಲಿನ ಸರ್ಕಾರಿ, ಇತರೆ ಕಾಮಗಾರಿಗಳು ಹಾಗೂ ಸಾರ್ವಜನಿಕರು ಪೂರೈಸಿಕೊಳ್ಳಬಹುದಾಗಿರುತ್ತದೆ. ಬಂಟ್ವಾಳ/ಬಡಗಬೆಳ್ಳೂರಿನಲ್ಲಿ 10,000 ಮೆಟ್ರಿಕ್ ಟನ್ ಬಂಟ್ವಾಳ/ಬಾಳ್ತಿಲದಲ್ಲಿ
10,000 ಮೆಟ್ರಿಕ್ ಟನ್,ಬೆಳ್ತಂಗಡಿ/ಪೆಟ್ರಮೆ 1,000 ಮೆಟ್ರಿಕ್ ಟನ್,
ಬೆಳ್ತಂಗಡಿ/ ತೆಕ್ಕಾರು- ಬ್ಲಾಕ್ 1,000 ಮೆಟ್ರಿಕ್ ಟನ್, ಬೆಳ್ತಂಗಡಿ/ ಬಾರ್ಯಾ-ಬ್ಲಾಕ್-1 3,000 ಮೆಟ್ರಿಕ್ ಟನ್,
ಬೆಳ್ತಂಗಡಿ/ ಬಾರ್ಯಾ-ಬ್ಲಾಕ್-2 2,500 ಮೆಟ್ರಿಕ್ ಟನ್,
ಮಂಗಳೂರು/ ಕೂಳವೂರು 10,000 ಮೆಟ್ರಿಕ್ ಟನ್,
ಮಂಗಳೂರು/ಮೊಗರು 6,000 ಮೆಟ್ರಿಕ್ ಟನ್,
ಮಂಗಳೂರು/ಮೊಗರು 13,000 ಮೆಟ್ರಿಕ್ ಟನ್,
ಮಂಗಳೂರು/ಅಡ್ಡೂರು 6,000 ಮೆಟ್ರಿಕ್ ಟನ್,
ಪುತ್ತೂರು/34-ನೆಕ್ಕಿಲಾಡಿ, 10,000 ಮೆಟ್ರಿಕ್ ಟನ್,
ಪುತ್ತೂರು/ಹಿರೆಬಂಡಾಡಿ 3500 ಮೆಟ್ರಿಕ್ ಟನ್,ಕಡಬ/ಕೇನ್ಯ-ಬ್ಲಾಕ್-1 200 ಮೆಟ್ರಿಕ್ ಟನ್, ಕಡಬ/ಅಲಂಕಾರು ಬ್ಲಾಕ್-2ನಲ್ಲಿ 5000 ಮೆಟ್ರಿಕ್ ಟನ್,ಕಡಬ/ಸವಣೂರುನಲ್ಲಿ 500 ಮೆಟ್ರಿಕ್ ಟನ್,ಕಡಬ/ಪೆರಾಬೆ ಬ್ಲಾಕ್-1 3000 ಮೆಟ್ರಿಕ್ ಟನ್,
ಕಡಬ/ಪೆರಾಬೆ ಬ್ಲಾಕ್-2 7000 ಮೆಟ್ರಿಕ್ ಟನ್
ಕಡಬ/ ಕೊಯಿಲ ಬ್ಲಾಕ್-2 500 ಮೆಟ್ರಿಕ್ ಟನ್,
ಕಡಬ/ಕೊಯಿಲದಲ್ಲಿ 2000 ಮೆಟ್ರಿಕ್ ಟನ್,
ಕಡಬ/ಅಲಂಕಾರು 2000 ಮೆಟ್ರಿಕ್ ಟನ್,
ಕಡಬ/ಕುಟ್ರುಪಾಡಿ 1500 ಮೆಟ್ರಿಕ್ ಟನ್,
ಕಬಡ/ನೂಜಿಬಾಳ್ತಿಲ 2000 ಮೆಟ್ರಿಕ್ ಟನ್,
ಕಬಡ/ನೂಜಿಬಾಳ್ತಿಲ 2000 ಮೆಟ್ರಿಕ್ ಟನ್ ದಾಸ್ತಾನಿದ್ದು ಸಾರ್ವಜನಿಕರು ಅವಶ್ಯವಿರುವ ಮರಳನ್ನು ಪಡೆಯಬಹುದಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.