ಸುಳ್ಯ:ಈ ದೇಶದಲ್ಲಿ ನಾವು ಅನುಭವಿಸುವ ಎಲ್ಲಾ ಹಕ್ಕುಗಳಿಗೆ, ಅವಕಾಶಗಳಿಗೆ, ಸವಲತ್ತು ಮತ್ತು ಸೌಭಾಗ್ಯಗಳಿಗೆ ಸಂವಿಧಾನ ಕಾರಣ. ಸತ್ಪ್ರಜೆಗಳಾಗಿ ಬದುಕುವ ಪ್ರತಿಯೊಬ್ಬ ನಾಗರಿಕರಿಗೆ ಸಂವಿಧಾನ ಸದಾ ರಕ್ಷಣೆಯನ್ನು ನೀಡುತ್ತದೆ ಎಂದು ಖ್ಯಾತ ವಕೀಲರು ಹಾಗೂ ಚಿಂತಕರಾದ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು. ಸುಳ್ಯ ತಾಲೂಕು ಕಂದಾಯ ಇಲಾಖೆ ಹಾಗೂ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸುಳ್ಯ ಕೆವಿಜಿ ಪುರಭವನದಲ್ಲಿ ಫೆ.20ರಂದು ನಡೆದ
ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ಭಾರತೀಯರ ಎಲ್ಲರ ಧರ್ಮಗ್ರಂಥ ನಮ್ಮ ಸಂವಿಧಾನ. ಹಿಂದೆ ಇದ್ದ ಅಸಮಾನತೆ, ಅಸ್ಪೃಶ್ಯತೆ, ಶೋಷಣೆಗಳನ್ನು ತೊಡೆದು ಹಾಕಿ ಎಲ್ಲರಿಗೂ ಸಮಪಾಲು ಮತ್ತು ಸಮ ಬಾಳು ನೀಡಿರುವುದು ನಮ್ಮಸಂವಿಧಾನ. ದೇಶದ ತಾಯಂದಿರ ಮತ್ತು ಜನತೆಯ ಕನಸನ್ನು ಬದಲಿಸಿರುವುದು, ಎಲ್ಲಾ ಕನಸುಗಳಿಗೂ ಮೂರ್ತರೂಪ ಕೊಟ್ಟಿರುವುದು ನಮ್ಮ ಸಂವಿಧಾನದ ಹೆಗ್ಗಳಿಕೆ.

ನಮಗೆ ಸ್ವಾತಂತ್ರ್ಯ, ಸಮಾನತೆ, ಅವಕಾಶಗಳನ್ನು ನೀಡಿದ ಸಂವಿಧಾನವು ನಮ್ಮ ನಂಬಿಕೆ, ಆಚರಣೆಯನ್ನು ಪೋಷಿಸಿ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು ಬಂದಿದೆ ಎಂದು ಹೇಳಿದರು. ನಾವೆಲ್ಲರೂ ಭಾರತೀಯರಾಗಬೇಕು, ನಮ್ಮ ನಡೆ ಭಾರತೀಯತೆಯಿಂದ ಕೂಡಿರಬೆಕು ಮತ್ತು ನಾವೆಲ್ಲರೂ ಸಂವಿಧಾನದ ಪ್ರತಿಪಾದಕರಾಗಬೇಕು ಎಂದು ಕರೆ ನೀಡಿದ ಅವರು ನಮ್ಮ ಉದಾತ್ತ ಸಂವಿಧಾನವನ್ನು ಕಾಪಾಡಿಕೊಂಡು ನಮ್ಮ ಸ್ವಾತಂತ್ರ್ಯವನ್ನು ಉಳಿಸಬೇಕು ಎಂದು ಹೇಳಿದರು.

ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ’ ಡಾ.ಬಿ.ಆರ್. ಅಂಬೇಡ್ಕರ್ ಅವರು ನಮಗೆ ಪರಮೋಚ್ಛ ಸಂವಿಧಾನವನ್ನು ನೀಡಿದ್ದಾರೆ. ಪ್ರತಿಯೊಬ್ಬರೂ ಸಂವಿಧಾನವನ್ನು ಅರಿತುಕೊಳ್ಳಬೇಕು ಮತ್ತು ಸಂವಿಧಾನದ ಆಶಯವನ್ನು ಮನೆ ಮನೆಗೆ ತಲುಪಿಸಬೇಕು ಎಂದರು.
ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮೋಹನ್ ಕುಮಾರ್, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಸುಳ್ಯ ಎಸ್ಐ ಈರಯ್ಯ ದೂಂತೂರು, ನಗರ ಪಂಚಾಯತ್ ಸದಸ್ಯರಾದ ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ಕೆ.ಎಸ್.ಉಮ್ಮರ್, ಬುದ್ಧ ನಾಯ್ಕ್, ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತಾ, ಶಿಲ್ಪಾ ಸುದೇವ್, ಸುಶೀಲಾ ಜಿನ್ನಪ್ಪ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಪಿ.ಸಿ.ಜಯರಾಮ, ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ವಿ.ಲೀಲಾಧರ, ಪ್ರಮುಖರಾದ ಲಕ್ಷ್ಮೀಶ ಗಬ್ಬಲಡ್ಕ, ಆನಂದ ಬೆಳ್ಳಾರೆ, ಸುಮನಾ ಬೆಳ್ಳಾರ್ಕರ್ ಸುಜಯಾ ಕೃಷ್ಣ, ಕತ್ತರ್ ಇಬ್ರಾಹಿಂ ಹಾಜಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್.ಸ್ವಾಗತಿಸಿದರು. ಲಕ್ಷ್ಮೀಶ ಗಬ್ಬಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ರಫ್ ವಂದಿಸಿದರು. ಟಿ.ಐ.ಲೂಕಾಸ್ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಕೆ.ಪಿ.ಜಾನಿ ಕಲ್ಲುಗುಂಡಿ ನೇತೃತ್ವದಲ್ಲಿ ಸಂಘಟಕರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಕೆ.ಪಿ.ಜಾನಿ ಕಲ್ಲುಗುಂಡಿ, ಇಕ್ಬಾಲ್ ಎಲಿಮಲೆ ಮಹಮ್ಮದ್ ಕುಂಞಿ ಗೂನಡ್ಕ, ವಸಂತ ಪೆಲ್ತಡ್ಕ, ಇಬ್ರಾಹಿಂ ಕಲ್ಲುಗುಂಡಿ, ಎ.ಕೆ.ಹಸೈನಾರ್, ಶಾಫಿ ಕುತ್ತಮೊಟ್ಟೆ, ಬಿಟ್ಟಿ ಬಿ ನೆಡುನಿಲಂ, ಕೆ.ಗೋಕುಲ್ದಾಸ್, ಶೌವಾದ್ ಗೂನಡ್ಕ, ರಾಜು ಪಂಡಿತ್ ಮತ್ತಿತರರು ಸಹಕರಿಸಿದರು.