ಸಂಪಾಜೆ:ಸಂಪಾಜೆ ಗ್ರಾಮದಲ್ಲಿ 3 ದಿನಗಳಿಂದ ವಿದ್ಯುತ್ ಕಡಿತ ಉಂಟಾಗಿರುವ ಹಿನ್ನಲೆಯಲ್ಲಿ ಮೆಸ್ಕಾಂ ಪುತ್ತೂರು ವಿಬಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ನೇತೃತ್ವದ ಮೆಸ್ಕಾಂ ಇಂಜಿನಿಯರ್ಗಳ ತಂಡ ಸಂಪಾಜೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ವಿವಿಧ ಕಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಲೈನ್ ಮೇಲೆ ಇರುವ
ಗಲ್ಲುಗಳನ್ನು ತೆರವು ಮಾಡುವ ಕೆಲಸ ಹಾಗೂ ಇತರ ಸಮಸ್ಯೆಗಳನ್ನು ಸರಿಪಡಿಸುವುದಾಗಿ ತಿಳಿಸಿದ್ದಾರೆ. ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ಜೊತೆ ಮಾತುಕತೆ ನಡೆಸಿದರು. ನಾಳೆಯಿಂದ ಸಂಪಾಜೆ ಗೇಟ್ ಬಳಿಯಿಂದ ಮರದ ಕೊಂಬೆ ತೆರವು ಮಾಡಲು 10ಜನರ ತಂಡ ಕಳುಹಿಸಿ ಕೊಡುವುದಾಗಿ ತಿಳಿಸಿದರು. ಸಾಧ್ಯ ಆದಷ್ಟು ಸಮಸ್ಯೆ ಪರಿಹಾರ ಮಾಡಲು ವೆವಸ್ಥೆ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಕ್ಕಿಲ್, ಸಂಪಾಜೆ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಉಪಾಧ್ಯಕ್ಷರಾದ ಎಸ್.ಕೆ.ಹನೀಫ್ ಮಾಜಿ ಅಧ್ಯಕ್ಷರಾದ ಜಿ.ಕೆ.ಹಮೀದ್ ಗೂನಡ್ಕ,ಧರ್ಮಸ್ಥಳ ವಿಪತ್ತು ತಂಡದ ಚಿದಾನಂದ, ಸಾಮಾಜಿಕ ಕಾರ್ಯಕರ್ತರಾದ ಸಿದ್ದಿಕ್ ದರ್ಕಸ್,ಹಾರೀಸ್ ಝಮ್ ಝಮ್ ಮಾಜಿ ಪಂಚಾಯತ್ ಸದಸ್ಯರಾದ ರಾಮಚಂದ್ರ ಕಲ್ಲಗದ್ದೆ,ಸಹಕಾರಿ ಸಂಘದ ವ್ಯವಸ್ಥಾಪಕರಾದ ವಿರೇಂದ್ರ ಜೈನ್ ಮತ್ತಿತರರು ಉಪಸ್ಥಿತರಿದ್ದರು









