ಲೂಸಿಯಾ:ಕ್ವಿಂಟನ್ ಡಿಕಾಕ್ (65; 38ಎ, 4X4, 6X4) ಬಿರುಸಿನ ಅರ್ಧ ಶತಕ ಹಾಗೂ ಕೇಶವ್ ಮಹಾರಾಜ್ (25ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಸೂಪರ್ ಎಂಟರ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಶುಕ್ರವಾರ ಇಂಗ್ಲೆಂಡ್ ಮೇಲೆ 7 ರನ್ಗಳ ಜಯ ಸಾಧಿಸಿತು. ಮೊದಲು ಬ್ಯಾಟ್ ದಕ್ಷಿಣ ಆಫ್ರಿಕಾ
20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 163 ರನ್ ಗಳಿಸಿತು.164 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 20 ಓವರ್ಗಳಲ್ಲಿ 6 ವಿಕೆಟ್ಗೆ 156 ರನ್ ಗಳಿಸಿತು.
ಕೊನೆಯ ಓವರ್ನಲ್ಲಿ ಗೆಲ್ಲಲು 14 ರನ್ಗಳ ಅಗತ್ಯವಿತ್ತು. ಆದರೆ ಆನ್ರಿಚ್ ನಾಕಿಯಾ ಅಂತಿಮ ಓವರ್ನಲ್ಲಿ ಹ್ಯಾರಿ ಬ್ರೂಕ್ (53) ಅವರ ಪ್ರಮುಖ ವಿಕೆಟ್ ಪಡೆದರಲ್ಲದೇ ಕೇವಲ ಅರು ರನ್ ಬಿಟ್ಟುಕೊಟ್ಟು ಗೆಲುವಿಗೆ ನೆರವಾದರು.ಹ್ಯಾರಿ ಬ್ರೂಕ್ 53, ಲಿಯಾಮ್ ಲಿವಿಂಗ್ಸ್ಟೋನ್ 33 ರನ್ ಗಳಿಸಿದರು. ಕೇಶವ್ ಮಹಾರಾಜ್ 25ಕ್ಕೆ2, ಕಗಿಸೊ ರಬಾಡ 32ಕ್ಕೆ2 ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಕ್ವಿಂಟನ್ ಮತ್ತು ರೀಜಾ ಹೆನ್ರಿಕ್ಸ್ ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 86 ರನ್ ಸೇರಿಸಿದರು.
ರೀಜಾ ಹೆನ್ರಿಕ್ಸ್ 19, ಕ್ವಿಂಟನ್ ಡಿಕಾಕ್ 65, ಡೇವಿಡ್ ಮಿಲ್ಲರ್ 43 ರನ್ ಬಾರಿಸಿದರು. ಜೋಫ್ರಾ ಆರ್ಚರ್ 40ಕ್ಕೆ3 ವಿಕೆಟ್ ಕಿತ್ತರು.