ಅಹಮದಾಬಾದ್: ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನದ ವಿರುದ್ಧ ಸೋಲು ಕಂಡಿದೆ. ಇದರೊಂದಿಗೆ ಆರ್ಸಿಬಿ ತಂಡ ಟೂರ್ನಿಯಿಂದ ಹೊರಬಿದ್ದಿದೆ. ರಾಜಸ್ಥಾನ್ ರಾಯಲ್ಸ್ ಎರಡನೇ ಕ್ಬಾಲಿಫಯರ್ ಪಂದ್ಯದಲ್ಲಿ
ಸನ್ರೈಸರ್ಸ್ ಹೈದ್ರಾಬಾದ್ ತಂಡವನ್ನು ಎದುರಿಸಲಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಿಗದಿತ 20 ಓವರ್ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು. ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ತಂಡವು 19 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ರಾಜಸ್ಥಾ ಪರ ಯಶಸ್ವಿ ಜೈಸ್ವಾಲ್ 45, ರಿಯಾನ್ ಪರಾಗ್ 36, ಶಿಮ್ರಾನ್ ಹೆಟ್ಮೇರ್ 26 ರನ್ ಬಾರಿಸಿದರು. ಬೆಂಗಳೂರು ಪರ ಪಾಟೀದಾರ್ 34, ಕೊಹ್ಲಿ 32, ಮಹಿಪಾಲ್ 32 ರನ್ ಹೊಡೆದು ಗಮನ ಸೆಳೆದರು. ರಾಜಸ್ಥಾನ ಪರ ಅವೇಶ್ ಖಾನ್ 3, ಅಶ್ವಿನ್ 2 ವಿಕೆಟ್ ಪಡೆದರು.