ಅಹಮದಾಬಾದ್: ಧ್ರುವ ಜುರೇಲ್ ಅವರ ಸೊಗಸಾದ ಬ್ಯಾಟಿಂಗ್ ಹಾಗೂ ರವಿ ಬಿಷ್ಣೋಯಿ ಅವರ ಸ್ಪಿನ್ ಮೋಡಿಯ ಬಲದಿಂದ ರಾಜಸ್ಥಾನ ರಾಯಲ್ಸ್ ತಂಡವು ಶನಿವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ 6 ರನ್ಗಳಿಂದ ಗುಜರಾತ್ ಟೈಟನ್ಸ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು.ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡವು
ಯಶಸ್ವಿ ಜೈಸ್ವಾಲ್ (55; 36ಎ, 4×6, 6×3) ಮತ್ತು ವೈಭವ್ ಸೂರ್ಯವಂಶಿ (31; 18ಎ, 4×5, 6×1) ಪವರ್ ಪ್ಲೇನಲ್ಲಿ 70 ರನ್ ಸೇರಿಸಿದರು. ಬಳಿಕ ಧ್ರುವ ಜುರೇಲ್ (75; 42ಎ, 4×5, 6×5) ಉತ್ತಮ ಕೊಡುಗೆ ನೀಡಿದರು. ಇದರಿಂದಾಗಿ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 210 ರನ್ ಗಳಿಸಿತು.ಕಠಿಣ ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಸಾಯಿ ಸುದರ್ಶನ್ (73; 44ಎ, 4×9, 6×3) ಹಾಗೂ ಕುಮಾರ್ ಕುಶಾಗ್ರ (18; 14ಎ) ಅವರು ಮೊದಲ ವಿಕೆಟ್ಗೆ 78 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ, ಬಿಷ್ಣೋಯಿ (41ಕ್ಕೆ4) ಅವರ ಸ್ಪಿನ್ ದಾಳಿ ಎದುರು ಮಧ್ಯಮ ಕ್ರಮಾಂಕದ ಬ್ಯಾಟರ್ಗಳು
ವಿಫಲರಾದರು.ನಾಯಕ ರಶೀದ್ ಖಾನ್ (24; 16ಎ) ಹಾಗೂ ಕಗಿಸೊ ರಬಾಡ (23; 16ಎ) ಅವರು ಎಂಟನೇ ವಿಕೆಟ್ಗೆ 43 ರನ್ ಜೊತೆಯಾಟವಾಡಿ, ಗೆಲುವಿನ ಆಸೆ ಚಿಗುರಿಸಿದ್ದರು. ಟೈಟನ್ಸ್ ಗೆಲುವಿಗೆ ಕೊನೆಯ ಎರಡು ಓವರ್ಗಳಲ್ಲಿ 15 ರನ್ ಅಗತ್ಯವಿತ್ತು. ಜೋಫ್ರಾ ಆರ್ಚರ್ ಹಾಗೂ ತುಷಾರ್ ದೇಶಪಾಂಡೆ ಅವರು ಕ್ರಮವಾಗಿ 19 ಮತ್ತು 20ನೇ ಓವರ್ನಲ್ಲಿ ತಲಾ 4 ರನ್ ನೀಡಿ, ರಾಯಲ್ಸ್ ತಂಡಕ್ಕೆ ಗೆಲುವು ತಂದಿತ್ತರು.ಆರ್ಆರ್ ಟೂರ್ನಿಯಲ್ಲಿ ಎರಡನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಶುಭಮನ್ ಗಿಲ್ ಅವರು ಕಣಕ್ಕಿಳಿಯದ ಕಾರಣ ರಶೀದ್ ಅವರು ಟೈಟನ್ಸ್ ನಾಯಕತ್ವ ವಹಿಸಿಕೊಂಡಿದ್ದರು.
ಸಂಕ್ಷಿಪ್ತ ಸ್ಕೋರು: ರಾಜಸ್ಥಾನ ರಾಯಲ್ಸ್: 20 ಓವರ್ಗಳಲ್ಲಿ 6ಕ್ಕೆ210 (ಯಶಸ್ವಿ ಜೈಸ್ವಾಲ್ 55, ವೈಭವ್ ಸೂರ್ಯವಂಶಿ 31, ಧ್ರುವ ಜುರೇಲ್ 75; ಕಗಿಸೊ ರಬಾಡ 42ಕ್ಕೆ2). ಗುಜರಾತ್ ಟೈಟನ್ಸ್: 20 ಓವರ್ಗಳಲ್ಲಿ 8ಕ್ಕೆ 204 (ಸಾಯಿ ಸುದರ್ಶನ್ 73, ಜೋಸ್ ಬಟ್ಲರ್ 26, ರಶೀದ್ ಖಾನ್ 30; ರವಿ ಬಿಷ್ಣೋಯಿ 41ಕ್ಕೆ4).










