ಮರ್ಕಂಜ: ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಸುಳ್ಯ, ಅಮರ ಸಂಘಟನಾ ಸಮಿತಿ ಸುಳ್ಯ ಹಾಗೂ ನಾಗ ಸಾನಿಧ್ಯ- ಗುಳಿಗ ಸಾನಿಧ್ಯ ಪನಿವಾರ ಮರ್ಕಂಜ ಇವುಗಳ ಸಂಯುಕ್ತ ಆಶ್ರಯದಲ್ಲಿ 5 ನೇ ವರ್ಷದ ‘ಕಂಡಡೂಂಜಿ ದಿನ” ಕಾರ್ಯಕ್ರಮ ಮರ್ಕಂಜದ ಪನ್ನೆಬೈಲಿನಲ್ಲಿ ನಡೆಯಿತು.ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕ ಪ್ರಭಾಕರನ್ ನಾಯರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಉದ್ಘಾಟನಾ ಸಮಾರಂಭದ
ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷರಾದ ಯೋಗಿತಾ ಗೋಪಿನಾಥ್ ವಹಿಸಿದ್ದರು.ಕಾಲೇಜಿನ ಪ್ರಾಂಶುಪಾಲರಾದ ಶೋಭಾ ಬೊಮ್ಮೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು ವೇದಿಕೆಯಲ್ಲಿ ರೋಟರಿ ಚಾರೀಟೇಬಲ್ ಟ್ರಸ್ಟ್ನ ಟ್ರಸ್ಟಿ ಮಧುಸೂದನ್ ಕುಂಭಕ್ಕೋಡು ರೋಟರಿ ಕ್ಲಬ್ ಸದಸ್ಯೆ ಲತಾ ಮಧುಸೂದನ್, ಮಿನುಂಗೂರು ಮರ್ಕಂಜದ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ, ಅಮರ ಸಂಘಟನಾ ಸಮಿತಿಯ ಸ್ಥಾಪಕಾದ್ಯಕ್ಷ ಪ್ರದೀಪ್ ಬೊಳ್ಳೂರು , ದೇವಚಳ್ಳ ಗ್ರಾಮದ ದ.ಕ ಪ್ರಾಥಮಿಕ ಶಾಲೆ ಸೇವಾಜೆಯ

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಾಂತಪ್ಪ ರೈ, ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹೊಸೋಳಿಕೆ, ಪನ್ನೆಬೈಲು ಗದ್ದೆ ಮಾಲಕರಾದ ಅಂಬಾಡಿ ಪನ್ನೆಯವರು , ರೋಟರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ವೀಣಾ ಶೇಡಿಕಜೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಸುಳ್ಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸುಧಾಕರ ರೈ, ವ್ಯವಸ್ಥಾಪಕರ ಸಮಿತಿ ಪಂಚಸ್ಥಾಪನೆ ಮರ್ಕಂಜ ನೆಲ್ಲೂರು ಕೆಮ್ರಾಜೆ ಯ ಅಧ್ಯಕ್ಷರಾದ ರಾಘವ ಕಂಜಿಪಿಲಿ, ಪಂಚಸ್ಥಾಪನೆ ಮರ್ಕಂಜ ನೆಲ್ಲೂರು ಕೆಮ್ರಾಜೆ ಯ ಮಾಜಿ ಅಧ್ಯಕ್ಷ ನವೀನ ಜೈನ್, ಕಡಬ ತಾಲ್ಲೂಕಿನ ಉಪ ತಹಸೀಲ್ದಾರ್ ಗೋಪಾಲ ಕೆ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ವಿದ್ಯಾರ್ಥಿನಿಯರಾದ ಅವನಿ, ದಿಶಾ, ಭಾನವಿ ಕೊೖಂಗಾಜೆ, ಪ್ರಾರ್ಥನೆಗೈದರು. ವಂದನಾರ್ಪಾಣಿಯನ್ನು ಪಿಯುಸಿ ವಿದ್ಯಾರ್ಥಿ ಸೋಹನ ಹಾಗೂ ಸಮಾರೋಪದ ಸಮಾರಂಭದ ವಂದನಾರ್ಪಾಣಿಯನ್ನು ಉಪನ್ಯಾಸಕ ವೊಮನ ದಾಸ್ ನೆರವೇರಿಸಿದರು. ತೀರ್ಥೇಶ್ ಯಾದವ ನಾರ್ಣಕಜೆ , ನವೀನ ಬಾಂಜಿಕೊಡಿ, ಶಶಿಕಾಂತ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.ಹಾಗೂ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಮರ ಸಂಘಟನೆಯ ಅಧ್ಯಕ್ಷರಾದ ಸಾತ್ವಿಕ್ ಮಡಪ್ಪಾಡಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಭವಾನಿ ಹಾಗೂ ತಂಡದವರಿಂದ
ಪಾಡ್ದನ ಹಾಡು,ನೇಜಿ ನೆಡುವುದು ಮತ್ತು ಸಾಂತಪ್ಪ ರೈ ಯವರ ಸಾರಥ್ಯದಲ್ಲಿ ಅಂಬಾಡಿಯವರ ಕೋಣದೊಂದಿಗೆ ಅವರ ತಂಡದವರು ಕಂಬಳದ ಪ್ರಾತ್ಯಕ್ಷಿಕೆಯೊಂದಿಗೆ ಸಾಂಪ್ರದಾಯಿಕ ಶೈಲಿಯ ಭತ್ತ ಬೇಸಾಯ ಪದ್ದತಿಯ ತಿಳುವಳಿಕೆ ನೀಡಲಾಯಿತು. ಹಾಗೆಯೇ ವಿದ್ಯಾರ್ಥಿಗಳು ದಿನವಿಡೀ ಹಳ್ಳಿಯ ಸಾಂಪ್ರದಾಯಿಕ ಆಟಗಳಾದ ಹಗ್ಗ ಜಗ್ಗಾಟ, ಹಿಂದು-ಮುಂದು ಓಟ, ಬುಗುರಿ ಆಟ, ಮೂರುಕಾಲಿನ ಓಟ, ಛದ್ಮವೇಷ, ಜಾನಪದ ನೃತ್ಯ, ರಿಲೇ, ಹ್ಯಾಂಡ್ಬಾಲ್ ಮುಂತಾದ ಆಟಗಳನ್ನ ಗದ್ದೆಯಲ್ಲಿ ಆಡಿ ,ಕುಣಿದು ನಲಿದರುನಲಿದರು.









