ಸುಳ್ಯ: ಚುನಾವಣೆಗಳಲ್ಲಿ ದೇಶದ ಅಭಿವೃದ್ದಿ ವಿಚಾರವಾಗಿ ಚರ್ಚೆ ನಡೆಯಬೇಕೇ ಹೊರತು ಭಾವನಾತ್ಮಕ ವಿಚಾರಗಳು ಅಲ್ಲ. ಮುಂದಿನ ಚುನಾವಣೆಯಲ್ಲಿ ಸಂವಿಧಾನದ ಪರ ಇರುವ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಎಂದು ರಾಷ್ಟ್ರ ರಕ್ಷಾ ವೇದಿಕೆ ಅಧ್ಯಕ್ಷ ಲಕ್ಷ್ಮೀಶ ಗಬ್ಬಲಡ್ಕ ಹೇಳಿದರು. ಸುಳ್ಯ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಮಾಜಕ್ಕೆ ಭಾರತದ ಸಂವಿಧಾನದ ಮತ್ತು ಅದರ ಉಳಿವಿನ ಮಹತ್ವವನ್ನು
ತಿಳಿಸುವ ಜವಾಬ್ದಾರಿ ಇದೆ. ರಾಷ್ಟ್ರ ರಕ್ಷಣೆ ಮತ್ತು ಸಂವಿಧಾನ ರಕ್ಷಣೆ ಬೇರೆ ಬೇರೆಯಲ್ಲ ಎಂದ ಅವರು ಪ್ರಜಾಪ್ರಭುತ್ವ ಆಧಾರದಲ್ಲಿ ಚುನಾಯಿತ ಸದಸ್ಯರನ್ನು ಆಮೀಷ ನೀಡಿ ಖರೀದಿ ಮಾಡುವುದರಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಿರ್ನಾಮ ಮಾಡಿದಂತಡೆ ಆಗುತ್ತದೆ. ಶಾಸನ ಸಭೆಗಳಲ್ಲಿ ಮಂಡನೆ ಆಗುವ ಶಾಸನಗಳು ಜನರ ಧ್ವನಿಯಾಗಬೇಕು. ಜನರ ಮಧ್ಯೆ ಚರ್ಚೆ ಆಗಬೇಕು ಎಂದು ಹೇಳಿದರು.
ವೇದಿಕೆಯ ಗೌರವ ಸದಸ್ಯ ಹಾಗೂ ನ.ಪಂ.ಸದಸ್ಯರಾದ
ಕೆ.ಎಸ್.ಉಮ್ಮರ್ ಮಾತನಾಡಿ ದೇಶದ ಅಭಿವೃದ್ದಿಗೆ, ಸಾಮಾಜಿಕ ಸಾಮರಷ್ಯಕ್ಕೆ ಒತ್ತು ಕೊಡುವವರಿಗೆ ಮತ ನೀಡಬೇಕು. ಶಾಂತಿ ಸೌರ್ಹಾದತೆಯ ಸಮಾಜ ಇಂದಿನ ಅಗತ್ಯ ಎಂದು ಹೇಳಿದರು. ಎಲ್ಲರೂ ಸಮಾನಾಗಿ ಬದುಕುವ ಶಾಂತಿ, ಸೌಹಾರ್ದತೆಯ ದೇಶ ಕಟ್ಟಬೇಕಾಗಿದೆ ಎಂದರು.
ವೇದಿಕೆಯ ಗೌರವ ಸದಸ್ಯ ಕೆ.ಪಿ.ಜಾನಿ ಮಾತನಾಡಿ ದೇಶದಲ್ಲಿನ ಹಲವು ಸಮಸ್ಯೆಗಳಿಂದ ಜನರು ಝರ್ಜರಿತರಾಗಿದ್ದಾರೆ.
ಇಂತಹಾ ಜನರ ಬದುಕಿನ ಜ್ಬಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಅಭಿವೃದ್ದಿ ವಿಚಾರವನ್ನು ಮುಂದಿಟ್ಟುಕೊಂಡು ಮತ ಕೇಳುವಂತಾಗಬೇಕು. ಜನರ ಸಮಸ್ಯೆ ಪರಿಹಾರಕ್ಕೆ, ಸಂವಿಧಾನ, ಅಭಿವೃದ್ಧಿಗೆ ಆದ್ಯತೆ ನೀಡುವವರಿಗೆ ಆದ್ಯತೆ ನೀಡಬೇಕು ಎಂದರು.
ಸುದ್ದಿಗೋಷ್ಟಿಯಲ್ಲಿ ರಾಷ್ಟ್ರ ರಕ್ಷಾ ವೇದಿಕೆಯ ಕಾರ್ಯದರ್ಶಿ ವಸಂತ ಪೆಲ್ತಡ್ಕ, ಉಪಾಧ್ಯಕ್ಷ ಅಚ್ಚುತ್ತ ಮೆಲ್ಕಜೆ, ಖಜಾಂಜಿ ಆಶ್ರಫ್ ಎಲಿಮಲೆ ಉಪಸ್ಥಿತರಿದ್ದರು.