ಸುಳ್ಯ: ಬಿಸಿಲ ಬೇಗೆಗೆ ಬೆಂದು ಬರಡಾದ ನೆಲಕ್ಕೆ ತಂಪೆರಗಿ ಹನಿ ಮಳೆಯ ಸಿಂಚನ. ಸುಳ್ಯ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಗುರುವಾರ ರಾತ್ರಿ ಮಳೆಯಾಗಿದೆ. ಸುಳ್ಯ ನಗರದ ಹಳೆಗೇಟು, ಗಾಂಧಿನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಲ ಹೊತ್ತು ಹನಿ ಮಳೆ ಸುರಿದಿದೆ. ಅದರಂತೆ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಭಾಗಗಳು ಸೇರಿ ವಿವಿಧ ಕಡೆ ಮಳೆಯಾಗಿದೆ. ಕೆಲವೆಡೆ ಹನಿ ಮಳೆಯಾದರೆ, ಕೆಲವೆಡೆ
ಸಾಧಾರಣ ಮಳೆಯಾಗಿರುವ ಬಗ್ಗೆ ವರದಿಯಿದೆ.
ಮಡಪ್ಪಾಡಿಯಲ್ಲಿ ಉತ್ತಮ ಮಳೆಯಾಗಿದ್ದು 15 ಮಿಮೀ ಮಳೆಯಾಗಿದೆ. ಸುಳ್ಯ, ಕಲ್ಲಾಜೆ, ಸುಬ್ರಹ್ಮಣ್ಯ,ಬಳ್ಫ, ಎಣ್ಮೂರು, ಉಬರಡ್ಕ, ಮರ್ಕಂಜ, ಕರಿಕ್ಕಳ, ಕಾಣಿಯೂರು ,ಕಡಬ ಮತ್ತಿತರ ಕಡೆಗಳಲ್ಲಿ ಹನಿ ಮಳೆಯಾಗಿದೆ. ಸರ್ವೆ,ಕೇನ್ಯ ಧರ್ಮಸ್ಥಳ , ಕೊಕ್ಕಡ,ಉರುವಾಲು ,ನೆಲ್ಯಾಡಿ ಸಾಧಾರಣ ಮಳೆ ಸುರಿದಿದೆ.ಪುತ್ತೂರು,ಕೆದಿಲ,ನರಿಮೊಗರು ಸಣ್ಣ ಮಳೆಯಾಗಿದೆ. ವಿರಾಜಪೇಟೆ,ಕಳಸ, ಕೊಪ್ಪ, ತೀರ್ಥಹಳ್ಳಿ, ಹೋಸನಗರ,ಸಾಗರ, ಉತ್ತಮ ಮಳೆಯಾಗಿದೆ ಎಂದು ವರದಿಯಾಗಿದೆ. ಉಜಿರೆ, ಧರ್ಮಸ್ಥಳ ಮತ್ತಿತರ ಕಡೆಗಳಲ್ಲಿ ಗಾಳಿಯೊಂದಿಗೆ ಮಳೆಯಾಗಿ ದೆ.
ಕೆಲವು ಕಡೆ ರಾತ್ರಿ ಮಳೆಯಾಗುವ ಸಾಧ್ಯತೆ ಇದೆ. ರಿಂದ 5ಮಿ.ಮೀ. ಮಳೆಯಾಗಬಹುದು. ನಾಳೆಯೂ ಇದೇ ರೀತಿ ಇರಬಹುದು. ಎಪ್ರೀಲ್ ತಿಂಗಳಲ್ಲಿ ಮಳೆ ಬಂದರೂ ಸಾಧಾರಣ ಮಳೆಯಾಗಬಹುದು. ಮೇ ತಿಂಗಳ ಕೊನೆಗೆ ಉತ್ತಮ ಮಳೆ ಬರುವ ಸಾಧ್ಯತೆ ಇದೆ ಎಂದು ಮಳೆ ದಾಖಲೆಗಾರರು ಹಾಗೂ ಹವಾಮಾನ ಅಧ್ಯಯನಸಾಕ್ತರಾದ ಪ್ರಸನ್ನ ಎಣ್ಮೂರು ಹೇಳುತ್ತಾರೆ.