ಸುಳ್ಯ: ಸುಳ್ಯದಲ್ಲಿ ಶನಿವಾರ ಸಂಜೆ ಸುರಿದ ಭರ್ಜರಿ ಮಳೆಗೆ ನೀರೆಲ್ಲಾ ರಸ್ತೆಯಲ್ಲಿಯೇ ತುಂಬಿ ಹರಿಯಿತು. ಹಲವು ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿತ್ತು. ಕೆಲವೆಡೆ ನೀರು ರಸ್ತೆಯಲ್ಲಿಯೇ ಶೇಖರಣೆಯಾಗಿತ್ತು.ಕೆಸರು ಮಿಶ್ರಿತ ನೀರು ಮುಖ್ಯ ರಸ್ತೆ, ಒಳ ರಸ್ತೆಗಳಲ್ಲಿ ತುಂಬಿದ್ದು ವಾಹನ ಸಂಚರಿಸುವಾಗ ಕಾರಂಜಿಯಂತೆ ಚಿಮ್ಮುತ್ತಿತ್ತು. ಪಾದಚಾರಿಗಳ ಮೇಲೂ ಸಿಂಚನವಾಗುತ್ತಿತ್ತು
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.