ಸುಳ್ಯ: ಸುಳ್ಯ ನಗರದಲ್ಲಿ ಏ.29 ರಂದು ಸಂಜೆಯ ವೇಳೆಗೆ ಮಳೆ ಸುರಿದಿದೆ.ಮೋಡ ಕವಿದ ವಾತಾವರಣ ಇದ್ದು ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚು ಸಮಯ ಉತ್ತಮ ಮಳೆಯಾಗಿದೆ. ಗುಡುಗಿನ ಅಬ್ಬರದೊಂದಿಗೆ ಉತ್ತಮ ಮಳೆ ಸುರಿದಿದೆ. ನೀರು ಚೆನ್ನಾಗಿ ಹರಿದು
ಹೋಗಿದೆ. ರಸ್ತೆ ಯಲ್ಲಿ, ಚರಂಡಿಯಲ್ಲಿ ನೀರು ತುಂಬಿ ಹರಿದಿದೆ. ಸುಳ್ಯದಲ್ಲಿ ಎರಡನೇ ಬಾರಿ ಉತ್ತಮ ಮಳೆಯಾಗಿದೆ. ಏ.26 ರಂದು ಉತ್ತಮ ಮಳೆಯಾಗಿತ್ತು.ಕಳೆದೆ ಒಂದೆರಡು ತಿಂಗಳಿನಿಂದ ವಿಪರೀತ ಸೆಕೆ, ಏರಿದ ಉಷ್ಣಾಂಶದಿಂದ ಜನರು ಬಸವಳಿದಿದ್ದರು. ಎಲ್ಲೆಡೆ ನೀರು ಬತ್ತಿ ಹೋಗಿ ಆಹಾಕಾರ ಉಂಟಾಗಿತ್ತು. ಇದೀಗ ಮಳೆ ಸುರಿದು ಇಳೆಗೆ ತಂಪೆರೆದಿದೆ.ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆಯಾಗಿದೆ.