ಹೈದರಾಬಾದ್: ಹರಿಯಾಣ ಸ್ಟೀಲರ್ಸ್ ತಂಡ ಹಾಗೂ ಪುಣೇರಿ ಪಲ್ಟನ್ ತಂಡ ಪ್ರೊ ಕಬಡ್ಡಿ ಲೀಗ್ ಫೈನಲ್ಗೆ ಪ್ರವೇಶಿಸಿದೆ. ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ವಿರುದ್ಧ 31–27ರಲ್ಲಿ ನಾಲ್ಕು ಪಾಯಿಂಟ್ಗಳ ಹೋರಾಟದ ಜಯಗಳಿಸಿ ಹರಿಯಾಣ ಸ್ಟೀಲರ್ಸ್ ಫೈನಲ್ ಪ್ರವೇಶಿಸಿತು. ಪುಣೇರಿ ತಂಡ 37–21 ರಲ್ಲಿ 16 ಅಂಕಗಳಿಂದ ಪಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ ಸತತ ಎರಡನೇ ಸಲ ಫೈನಲ್ ಪ್ರವೇಶಿಸಿತ್ತು. ಶುಕ್ರವಾರ ನಡೆಯುವ ಫೈನಲ್ನಲ್ಲಿ ಪುಣೇರಿ ಮತ್ತು ಹರಿಯಾಣ ತಂಡ ಮುಖಾಮುಖಿಯಾಗಲಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post