ಪೆರಾಜೆ: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ 2ನೇ ಸೋಣ ಶನಿವಾರದ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ನಡೆಯಿತು. ದೇವಲದಲ್ಲಿ ವಿಶೇಷ ಶನಿಪೂಜೆ ನೆರವೇರಿತು. ನೂರಾರು ಮಂದಿ ಭಕ್ತರು ಆಗಮಿಸಿದ್ದರು.
ಯಕ್ಷಗಾನ ತಾಳಮದ್ದಳೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ
ಆಡಳಿತ ಮೊಕ್ತೇಸರ ಎನ್.ಎ. ಜಿತೇಂದ್ರ ನಿಡ್ಯಮಲೆ, ಆಡಳಿತ ಮಂಡಳಿಯ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು, ದೇವಸ್ಥಾನದ ತಕ್ಕರುಗಳಾದ ಪುರುಷೋತ್ತಮ ನಿಡ್ಯಮಲೆ, ಗಣಪತಿ ಕುಂಬಳಚೇರಿ , ಭಾಸ್ಕರ ಕೋಡಿ, ಆಡಳಿದ ಮಂಡಳಿಯ ಸದಸ್ಯ ಆರ್.ಡಿ.ಆನಂದ, ಆಡಳಿತ ಮಂಡಳಿಯ ಸಹ ಕಾರ್ಯದರ್ಶಿ ಚಿನ್ನಪ್ಪ ಅಡ್ಕ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.