ಪಂಜ:ಸೀಮೆ ದೇವಸ್ಥಾನ ಪಂಜ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ ಫೆ.15ರಂದು ನಡೆಯಲಿದೆ.
ರಾತ್ರಿ 8ರಿಂದ 9-45ರ ತನಕ ಶ್ರೀ ದೇವರಿಗೆ ಏಕಾದಶರುದ್ರಾಭಿಷೇಕ, ಬಿಲ್ವಾರ್ಚನೆ, ರುದ್ರ ಪಾರಾಯಣ ನಡೆಯಲಿದೆ.ರಾತ್ರಿ 10ಗಂಟೆಗೆ ಮಹಾಪೂಜೆ ಸೇವೆಗಳಾಗಿ ಮಧ್ಯಾಹ್ನ ಸರ್ವಸೇವೆ, ಶಿವಪೂಜೆ, ಮಹಾಪೂಜೆ, ಬಿಲ್ವಾರ್ಚನೆ ರುದ್ರಾಭಿಷೇಕ. ರಾತ್ರಿ ಶಿವಪೂಜೆ, ಮಹಾಪೂಜೆ, ಬಿಲ್ವಾರ್ಚನೆ, ರುದ್ರಾಭಿಷೇಕ ನಡೆಯಲಿದೆ. ಪೂರ್ವಾಹ್ನ 8ರಿಂದ
ರಾತ್ರಿ 8ರ ತನಕ ಭಜನಾ ಸಂಕೀರ್ತನೆ ನಡೆಯಲಿದೆ.8ರಿಂದ9 ಶ್ರೀ ಪಂಚಶ್ರೀ ಭಜನಾ ಮಂಡಳಿ ಪಂಬೆತ್ತಾಡಿ,9ರಿಂದ 10 ಶ್ರೀ ಶಾರದಾಂಭಾ ಭಜನಾ ಮಂಡಳಿ ಪಂಜ, 10ರಿಂದ 11 ಶ್ರೀ ಪಂಚಲಿಂಗೇಶ್ವರ ಮಕ್ಕಳ ಭಜನಾ ತಂಡ ನಾಗತೀರ್ಥ,11ರಿಂದ 12ಶ್ರೀ ಶಂಕರನಾರಾಯಣ ಭಜನಾ ಮಂಡಳಿ ಕೂತ್ಕುಂಜ,12ರಿಂದ 1 ಭಾವನಾ ಬಳಗ ಪಂಜ, 1ರಿಂದ 2.00 ಶ್ರೀಕೃಷ್ಣ ಭಜನಾ ಮಂಡಳಿ ಅಡ್ಡಬೈಲು, 2ರಿಂದ 3ಶ್ರೀ ಉಳ್ಳಾಕುಲು ಕಲಾರಂಗ ಪಲ್ಲೋಡಿ,
3ರಿಂದ 4ಶ್ರೀ ಧರ್ಮ ಶಾಸ್ತ್ರವು ಭಜನಾ ಮಂಡಳಿ ಬಳ್ಪ,
4ರಿಂದ 5 ಶ್ರೀವಿಷ್ಣು ಭಜನಾ ಮಂಡಳಿ ಅಳ್ಪೆ, ಚಿಂಗಾಣಿಗುಡ್ಡೆ
5ರಿಂದ 6 ಶ್ರೀ ಸಾಕ್ಷಾತ್ ಶಿವ ಭಜನಾ ಮಂಡಳಿ ಚಾರ್ವಾಕ
6ರಿಂದ 7ಶಿವಳ್ಳಿ ಸಂಪದ ಪಂಜ
7ರಿಂದ 8ವನಿತಾ ಸಮಾಜ ಪಂಜ ಇವರಿಂದ ಭಜನಾ ಸೇವೆ ನಡೆಯಲಿದೆ.
ಪಾದಯಾತ್ರೆ:
ಶ್ರೀ ಕಪಿಲೇಶ್ವರ ದೇವಸ್ಥಾನ ಚಾರ್ವಾಕ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ. ಧರ್ಮಪಾಲ ಕರಂದ್ಲಾಜೆ ಹಾಗೂ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ ಗೌಡ ಇಡ್ಯಡ್ಕ ಇವರ ನೇತೃತ್ವದಲ್ಲಿ ವ್ಯವಸ್ಥಪನಾ ಸಮಿತಿಯ ಸದಸ್ಯರು ಹಾಗೂ ಕೂಡುಕಟ್ಟಿನ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಸೀಮೆ ದೇವಸ್ಥಾನ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಚಾರ್ವಾಕ, ಎಡಮಂಗಲ, ಪುಳಿಕುಕ್ಕು ಮಾರ್ಗವಾಗಿ ನೂರಾರು ಭಕ್ತರು ಪಂಜ ಸೀಮೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲಕ್ಕೆ ಆಗಮಿಸಲಿದ್ದು ಪಾದಯಾತ್ರೆಯ ಭಕ್ತಾದಿಗಳನ್ನು ಪೂರ್ವಾಹ್ನ 11 ಗಂಟೆಗೆ ಪಂಜ ಪೇಟೆಯ ದ್ವಾರದ ಬಳಿಯಲ್ಲಿ ಪಂಜ ಶ್ರೀ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ನೇತೃತ್ವದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಭಕ್ತರು ಸ್ವಾಗತಿಸಿ ಶ್ರೀ ದೇಗುಲಕ್ಕೆ ಪಾದಯಾತ್ರೆಯಲ್ಲಿ ಆಗಮಿಸಲಿದ್ದಾರೆ.ಊರ ಭಕ್ತಾದಿಗಳೆಲ್ಲರೂ ಪಾದಯಾತ್ರೆಯಲ್ಲಿ ಭಾಗವಹಿಸಬೇಕಾಗಿ
ಡಾ. ದೇವಿಪ್ರಸಾದ್ ಕಾನತ್ತೂರ್ ವಿನಂತಿಸಿದ್ದಾರೆ.




