ಸುಳ್ಯ: ಚುನಾವಣಾ ಪ್ರಚಾರಕ್ಕಾಗಿ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್. ಆರ್ ಅವರು ಮಾ.30ರಂದು ಸುಳ್ಯಕ್ಕೆ ಅಗಮಿಸಿದ್ದಾರೆ. ಬೆಳಿಗ್ಗೆ ಸುಳ್ಯಕ್ಕೆ ಆಗಮಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿದ ಅವರು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಚಾರ ಆರಂಭಿಸಿದರು.
ಬಳಿಕ
ಕಲ್ಕುಡ ದೈವಸ್ಥಾನ, ಹಾಗೂ ಅರಂಬೂರಿನ ಮದರ್ ತೆರೇಸಾ ಚರ್ಚ್ಗೆ ಹಾಗೂ ಮೊಗರ್ಪಣೆ ಮಸೀದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇಂದು ಅವರು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಸುಳ್ಯ ಕ್ಷೇತ್ರದ ಡಿಸಿಸಿ ಉಸ್ತುವಾರಿ ಎನ್.ಜಯಪ್ರಕಾಶ್ ರೈ,ವಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಪ್ರಮುಖರಾದ ರಾಧಾಕೃಷ್ಣ ಬೊಳ್ಳೂರು,ಕಿರಣ್ ಬುಡ್ಲೆಗುತ್ತು, ವಿಜಯಕುಮಾರ್ ರೈ ಸೊರಕೆ, ಡಾ.ಎನ್.ಎ.ಜ್ಞಾನೇಶ್, ಮಹಮ್ಮದ್ ಕುಂಞಿ ಗೂನಡ್ಕ, ಕೆ.ಎಂ.ಮುಸ್ತಫ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಪಿ.ಎ.ಮಹಮ್ಮದ್,ಜಿ.ಕೆ.ಹಮೀದ್ ಗೂನಡ್ಕ, ರಹೀಂ ಬೀಜದಕಟ್ಟೆ, ಎಸ್.ಕೆ.ಹನೀಫ,, ಶೌವಾದ್ ಗೂನಡ್ಕ
ರಾಜು ಪಂಡಿತ್, ರಂಜಿತ್ ರೈ ಮೇನಾಲ, ಇಸ್ಮಾಯಿಲ್ ಪಡ್ಪಿನಂಗಡಿ,ಸಂಶುದ್ದೀನ್, ಮಹಮ್ಮದ್ ಫವಾಝ್, ಕೇಶವ ಮೊರಂಗಲ್ಲು, ಅಶೋಕ್ ಚೂಂತಾರು, ಧೀರಾ ಕ್ರಾಸ್ತಾ ಮತ್ತಿತರರು ಉಪಸ್ಥಿತರಿದ್ದರು.